ರಾಜ್ಯ

ಎಟಿಎಂ ಹಂತಕನ ಮಧುಕರ್ ರೆಡ್ಡಿಯನ್ನು ನಾಳೆ ನಗರಕ್ಕೆ ಕರೆತರುವ ಸಾಧ್ಯತೆ

ಎಟಿಎಂ ಹಂತಕ ಮಧುಕರ್ ರೆಡ್ಡಿ (೩೨) ವಶಕ್ಕಾಗಿ ಶನಿವಾರ ಆಂಧ್ರಪ್ರದೇಶಕ್ಕೆ ತೆರಳಿರುವ ನಗರ ಪೊಲೀಸರು ಮಂಗಳವಾರ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ.

ಎಟಿಎಂ ಹಂತಕನ ಮಧುಕರ್ ರೆಡ್ಡಿಯನ್ನು ನಾಳೆ ನಗರಕ್ಕೆ ಕರೆತರುವ ಸಾಧ್ಯತೆ
ಎಟಿಎಂ ಹಂತಕ ಮಧುಕರ್ ರೆಡ್ಡಿ
Published On :
ಬೆಂಗಳೂರು: ಎಟಿಎಂ ಹಂತಕ ಮಧುಕರ್ ರೆಡ್ಡಿ (೩೨) ವಶಕ್ಕಾಗಿ ಶನಿವಾರ ಆಂಧ್ರಪ್ರದೇಶಕ್ಕೆ ತೆರಳಿರುವ ನಗರ ಪೊಲೀಸರು ಮಂಗಳವಾರ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. 
ನವೆಂಬರ್ ೨೦೧೩ ರಲ್ಲಿ ಎನ್ ಆರ್ ವೃತ್ತದ (ಕಾರ್ಪೊರೇಷನ್ ವೃತ್ತ) ಎಟಿಎಂ ನಲ್ಲಿ ಬ್ಯಾಂಕ್ ಸಿಬ್ಬಂದಿ ಜ್ಯೋತಿ ಯಾದವ್ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ರೆಡ್ಡಿಯನ್ನು ಚಿತ್ತೂರು ಪೊಲೀಸರು ಶನಿವಾರ ಬಂಧಿಸಿದ್ದರು. ಈ ಆರೋಪಿ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. 
ರೆಡ್ಡಿಯನ್ನು ವಿಚಾರಣೆಗೆ ಕರೆತರಲು ಮುಂದಿನ ಕ್ರಮಗಳ ಬಗ್ಗೆ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಭಾನುವಾರ ಸಭೆ ನಡೆಸಿದ್ದರು. 
ಆರೋಪಿ ಬಂಧನ ಸುದ್ದಿ ತಳಿದ ನಂತರ ಕೇಂದ್ರ ಕ್ರೈಮ್ ಬ್ರಾಂಚ್ ಪೊಲೀಸರು ಶನಿವಾರವೇ ಮದನಪಲ್ಲಿಗೆ ತಲುಪಿದ್ದಾರೆ. ಹಾಗೆಯೇ ವಿಶೇಷ ಪೊಲೀಸ್ ತಂಡ ಕೂಡ ಆಂಧ್ರ ಪ್ರದೇಶಕ್ಕೆ ತೆರಳಿದೆ. 
ಹೆಚ್ಚಿನ ವಿಚಾರಣೆಗೆ ವಶಕ್ಕೆ ಒಪ್ಪಿಸುವಂತೆ ಅಧಿಕಾರಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಕೂಡ ಆಂಧ್ರ ಪ್ರದೇಶದಲ್ಲಿ ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ರೆಡ್ಡಿಯನ್ನು ಜೈಲಿಗೆ ಹಾಕಲಾಗಿತ್ತಾದರೂ ಅವನು ತಪ್ಪಿಸಿಕೊಂಡು ಜ್ಯೋತಿ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.