ಬೆಂಗಳೂರು: ಸ್ನೇಹಿತನಿಂದ ವಂಚನೆ, ಗೆಳೆಯನ ಮನೆಯಲ್ಲೇ ವಿಷಕುಡಿದು ಆತ್ಮಹತ್ಯೆ ಯತ್ನ
40 ಲಕ್ಷ ರು. ಸಾಲ ಪಡೆದ ಸ್ನೇಹಿತ ವಂಚಿಸಿದನೆಂದು ಹಿನ್ನೆಲೆಯಲ್ಲಿ ಖಾಸಗಿ ಆಟೊಮೊಬೈಲ್ ಸರ್ವೀಸ್ ಕಂಪನಿ ಉದ್ಯೋಗಿ ಹಣ ಪಡೆದ ಗೆಳೆಯನ ಮನೆಯಲ್ಲೇ ವಿಷ ...

ಬೆಂಗಳೂರು: 40 ಲಕ್ಷ ರು. ಸಾಲ ಪಡೆದ ಸ್ನೇಹಿತ ವಂಚಿಸಿದನೆಂದು ಹಿನ್ನೆಲೆಯಲ್ಲಿ ಖಾಸಗಿ ಆಟೊಮೊಬೈಲ್ ಸರ್ವೀಸ್ ಕಂಪನಿ ಉದ್ಯೋಗಿ ಹಣ ಪಡೆದ ಗೆಳೆಯನ ಮನೆಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದವ್ವಿ ನಡೆದಿದೆ.
ಸುಂಕದಕಟ್ಟೆ ನಿವಾಸಿ ಮಧು ತನ್ನ ಸ್ನೇಹಿತ ಗಂಗಾಧರ್ ಎಂಬಾತನಿಗೆ 40 ಲಕ್ಷ ರೂ ಹಣ ನೀಡಿದ್ದ. ಹಣ ವಾಪಸ್ ನೀಡುವಂತೆ ಮಧು ಹೇಳುತ್ತಿದ್ದರೂ ಗಂಗಾಧರ್ ನೀಡಿರಲಿಲ್ಲ.
ಬುಧವಾರ ಬೆಳಗ್ಗೆ ಗಂಗಾಧರ್ ಮನೆಗೆ ಬಂದ ಮಧು ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ಆದರೆ ಈ ವೇಳೆ ಗಂಗಾಧರ್ ನನಗೆ ಹಣ ನೀಡಲು ಆಗುತ್ತಿಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಧು ತನ್ನ ಜೊತೆಗೆ ತಂದಿದ್ದ ವಿಷವನ್ನು ಕುಡಿದಿದ್ದಾನೆ, ಸ್ಥಳದಲ್ಲೇ ಕುಸಿದು ಬಿದ್ದ ಆತನನ್ನು ಮಧು ಸ್ನೇಹಿತರ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ,
ಗಸ್ತಿನಲ್ಲಿದ್ದ ಹೊಯ್ಸಳ ಪಡೆ ಮಧುನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಧು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಗಂಗಾಧರ್ ಗಾಗಿ ಹುಡುಕಾಟ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


