ಮಹಾದಾಯಿ ವಿವಾದ: ಗೋವಾ ಪ್ರಸ್ತಾಪಕ್ಕೆ ರೈತಪರ ನಾಯಕರು ಅಸಮಾಧಾನ
ಮಹಾದಾಯಿ ನದಿಯಿಂದ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಬಿಡಲು ಕೊನೆಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸಮ್ಮತಿ ನೀಡಿದ್ದಾರೆ...

Published On :
ಹುಬ್ಬಳ್ಳಿ: ಮಹಾದಾಯಿ ನದಿಯಿಂದ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಬಿಡಲು ಕೊನೆಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸಮ್ಮತಿ ನೀಡಿದ್ದಾರೆ.
ಗೋವಾ ಸಮ್ಮತಿ ನೀಡುವುದರಿಂದಾಗಿ ಮಹಾದಾಯಿ ಯೋಜನೆಯಾಗಾರಿ ಒಂದೂವರೆ ವರ್ಷದಿಂದ ನಿರಂತರ ಧರಣಿ, ಪ್ರತಿಭಟನೆ ನಡೆಸುತ್ತಿರುವ ಉತ್ತರ ಕರ್ನಾಟಕ ರೈತರಿಗೆ ಅರ್ಧ ಯಶಸ್ಸು ದೊರೆತಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ನಡೆಸಿದ ಪ್ರಯತ್ನಕ್ಕೂ ಫಲ ಸಿಕ್ಕಂತಾಗಿದೆ.
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಜನರ ಕಣ್ಣೊರೆಸುವ ತಂತ್ರ ಹೂಡುತ್ತಿದ್ದಾರೆಂದು ಕಾಂಗ್ರೆಸ್ ಈ ಹಿಂದೆ ಆರೋಪ ಮಾಡಿತ್ತು. ಮಹಾದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನವೊಲಿಸಲು ಬಿಜೆಪಿ ವಿಫಲವಾಗಿದೆ ಎಂದು ಹೇಳಿತ್ತು.
ಹುಬ್ಬಳ್ಳಿ-ಧಾರವಾಡ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಜನರಿಗೆ ಮಹದಾಯಿ ನದಿಯಿಂದ ಕುಡಿಯುವ ನೀರು ಒದಗಿಸಲು ತನ್ನ ವಿರೋಧವಿಲ್ಲ. ಈ ಸಂಬಂಧ ಮಾತುಕತೆಗೆ ಸಿದ್ಧ ಎಂದು ಗೋವಾ ರಾಜ್ಯ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಆದರೆ, ಯಡಿಯೂರಪ್ಪ ಅವರಿದೆ ಪತ್ರ ಬರೆದ ಮಾತ್ರಕ್ಕೆ ರಾಜ್ಯಕ್ಕೆ ನೀರು ಹರಿಯುವುದಿಲ್ಲ. ಗೋವಾ ಮತ್ತು ಕರ್ನಾಟಕ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ ನೀರಿನ ಪ್ರಮಾಣದ ಬಗ್ಗೆ ಒಮ್ಮತ ನಿರ್ಧಾರ ಕೈಗೊಂಡು ಈ ಮಾಹಿತಿಯನ್ನು ಟ್ರಿಬ್ಯುನಲ್'ಗೆ ನೀಡಬೇಕು. ಬಳಿಕ ಟ್ರಿಬ್ಯುನಲ್ ಆದೇಶದ ಮೇರೆಗೆ ನೀರು ರಾಜ್ಯಗಳಿಗೆ ಲಭಿಸುತ್ತದೆ.
ಕರ್ನಾಟಕ ಮಹಾದಾಯಿಯಿದಂ 7 ಟಿಎಂಸಿ ನೀರು ಕೇಳಿದ್ದರೂ ಕುಡಿಯುವ ಉದ್ದೇಶಕ್ಕಾಗಿ ಗೋವಾ ಎಷ್ಟು ನೀರು ಕೊಡಲು ಒಪ್ಪಿಕೊಳ್ಳಲಿದೆ ಎಂಬುದು ಉಭಯ ರಾಜ್ಯ ಸರ್ಕಾರಗಳ ಮುಖ್ಯಸ್ಥ ನಡುವೆ ನಡೆಯಬೇಕಾದ ಮಾತುಕತೆಯ ನಂತರವೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು ಈ ಹಿನ್ನಲೆಯಲ್ಲಿ ಈ ಬೆಳವಣಿಗೆಗಳು ಸಹಜವಾಗಿಯೇ ಕುತೂಹಲಗಳನ್ನು ಮೂಡಿಸಿದೆ.
ಇನ್ನು ಗೋವಾ ನಡೆಗೆ ರೈತರ ಪರ ನಾಯಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕೇವಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಾಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ವಿವಾದ ಕುರಿತು ನ್ಯಾಯಾಂಗ ಪ್ರಕ್ರಿಯೆಗಳು ನಡೆಯಬೇಕಿದೆ. ಗೋವಾ ಸರ್ಕಾರ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರಕ್ಕೆ ಪತ್ರವನ್ನು ಬರೆಯಬೇಕಿದೆ. ನ್ಯಾಯಾಧೀಕರಣ ಆದೇಶಕ್ಕೂ ಮುನ್ನ ತನ್ನ ಉದ್ದೇಶವನ್ನು ಪತ್ರದಲ್ಲಿ ತಿಳಿಸಬೇಕಿದೆ. ಇದಾದ ಬಳಿಕವೇ ವಿವಾದ ಕುರಿತ ಧನಾತ್ಮಕ ಹಾಗೂ ಋಣಾತ್ಮಕ ಬೆಳವಣಿಗೆಗಳು ತಿಳಿದುಬರಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


