ಚಳಿಗೆ ನಡುಗಿದ ಸಿಲಿಕಾನ್ ಸಿಟಿ: ಡಿಸೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ಮುಂದುವರೆಯಲಿದೆ ಮೈಕೊರೆವ ಚಳಿ
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಮೈಕೊರೆಯುವ ಚಳಿ ಮುಂದುವರೆದಿದ್ದು, ಬಹುತೇಕ ಕರೆ ಇಬ್ಬನಿಸಹಿತ ಚಳಿ ಮೈ ನಡುಗಿಸುತ್ತಿದೆ. ಇದೇ ವಾತಾವರಣ ಡಿಸೆಂಬರ್ ಅಂತ್ಯದವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ...

Published On :
ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಮೈಕೊರೆಯುವ ಚಳಿ ಮುಂದುವರೆದಿದ್ದು, ಬಹುತೇಕ ಕರೆ ಇಬ್ಬನಿಸಹಿತ ಚಳಿ ಮೈ ನಡುಗಿಸುತ್ತಿದೆ. ಇದೇ ವಾತಾವರಣ ಡಿಸೆಂಬರ್ ಅಂತ್ಯದವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಡಿಸೆಂಬರ್ 27ರ ವೇಳೆಗೆ ತಾಪಮಾನ ಕನಿಷ್ಟ 17 ಡಿಗ್ರಿ ಸೆಲ್ಷಿಯಸ್'ಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಕೆಎಸ್ಎನ್'ಡಿಎಂಸಿಯಲ್ಲಿನ ವಿಜ್ಞಾನಿ ಎಸ್ಎಸ್ಎಂ ಗವಾಸ್ಕರ್ ಅವರು, ಬೆಂಗಳೂರಿನ ಕೆಲವೆಡೆ ಈಗಾಗಲೇ ತಾಪಮಾನ 13-14 ಡಿಗ್ರಿ ಸೆಲ್ಷಿಯಸ್'ನಷ್ಟು ದಾಖಲಾಗಿದೆ. ಹಸಿರು ಪ್ರದೇಶಗಳಾಗಿರುವ ಲಾಲ್'ಬಾಗ್, ಹೇಸರಗಟ್ಟದಲ್ಲಿ 16ಡಿಗ್ರಿ ಸೆಲ್ಷಿಯಸ್'ನಷ್ಟು ಕನಿಷ್ಟ ತಾಪಮಾನ ದಾಖಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ 1.6ರಿಂದ 3 ಡಿಗ್ರಿ ಸೆಲ್ಷಿಯಸ್ ನಷ್ಟು ದಾಖಲಾಗಿದೆ ಎಂದು ಹೇಳಿದ್ದಾರೆ. 16 ಡಿಗ್ರಿ ಸೆಲ್ಷಿಯಸ್ ಬೆಂಗಳೂರಿನ ಕನಿಷ್ಟ ತಾಪಮಾನವಾಗಿದೆ. ವಿಜಯಪುರದಲ್ಲಿ 9.2 ಡಿಗ್ರಿ ಸೆಲ್ಷಿಯಸ್ ನಷ್ಟು ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್ಎನ್'ಡಿಎಂಸಿ) ಮಾಹಿತಿ ನೀಡಿರುವ ಪ್ರಕಾರ, ವಿಜಯಪುರದ ದಡಮತ್ತಿ ಹೋಭ್ಳಿಯಲ್ಲಿ 7.1ಡಿಗ್ರಿ ಸೆಲ್ಷಿಯಸ್'ನಷ್ಟು ತಾಪಮಾನ ದಾಖಲಾಗಿದೆ ಎಂದು ತಿಳಿಸಿದೆ.
ಇನ್ನು 2-3 ದಿನಗಳಲ್ಲಿ ಕರ್ನಾಟಕದ ದಕ್ಷಿಣ ಭಾಗದ ಆಂತರಿಕ ಪ್ರದೇಶಗಳಲ್ಲಿ ಬೆಚ್ಚಿಗಿನ ವಾತಾವರಣ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಮಂಜುಕವಿದ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


