ರಾಜ್ಯ

ಬಿಬಿಎಂಪಿ ಯ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಬಿಡುಗಡೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫಿಕ್ಸ್ ಮೈ ಸ್ಟ್ರೀಟ್ (ನನ್ನ ಬೀದಿ ಸರಿಪಡಿಸಿ) ಆ್ಯಪ್ ಅನ್ನು ಬಿಡುಗಡೆ ಮಾಡಿದೆ

ಬಿಬಿಎಂಪಿ ಯ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಬಿಡುಗಡೆ
ಬಿಬಿಎಂಪಿ ಯ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಬಿಡುಗಡೆ
Published On :
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫಿಕ್ಸ್ ಮೈ ಸ್ಟ್ರೀಟ್ (ನನ್ನ ಬೀದಿ ಸರಿಪಡಿಸಿ) ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
ಆ್ಯಪ್ ಮುಖೇನ ನಾಗರಿಕರು ತಮ್ಮ ರಸ್ತೆಯಲ್ಲಿನ ಸಮಸ್ಯೆ ಕುರಿತಂತೆ ಛಾಯಾಚಿತ್ರ ಸಮೇತ ದೂರು ಸಲ್ಲಿಸಬಹುದಾಗಿದೆ. ಹೀಗೆ ದೂರು ಸಲ್ಲಿಸಿದ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಂದೇಶ ರವಾನೆಯಾಗುತ್ತದೆ.
ರಸ್ತೆ ಗುಂಡಿ, ಕಸ, ಬೀದಿ ದೀಪ  ಸೇರಿ ಇತರೆ ಯಾವ ಸಮಸ್ಯೆಗಳಿದ್ದರೂ ಸಹ  ಈ ಆ್ಯಪ್ ಮೂಲಕ ದೂರು ಸಲ್ಲಿಸಲು ಸಾದ್ಯ. ಹಾಗೆಯೇ ಸಮಸ್ಯೆ ಬಗೆಹರಿದ ನಂತರ ದೂರು ಸಲ್ಲಿಸಿದ್ದವರ ಮೊಬೈಲ್ ಗೆ ಚಿತ್ರ ಸಮೇತ ಸಂದೇಶ ಸಿಗುತ್ತದೆ. ನಾಗರಿಕರು ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು ಇದರ ಸಂಬಂಧ ಲಿಂಕ್ ಹೀಗಿದೆ-  bit.ly/2nKAWCe

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.