ರಾಜ್ಯ

ಡಿಸೆಂಬರ್ 8ರಿಂದ 4 ದಿನಗಳ ಕಾಲ ಬೆಂಗಳೂರಿನಲ್ಲಿ ಮತ್ಸ್ಯ ಮೇಳ

ನಗರದಲ್ಲಿ ಡಿಸೆಂಬರ್ 8ರಿಂದ ಪ್ರಾರಂಭಗೊಳ್ಳಲಿರುವ ಕರ್ನಾಟಕದ ಪ್ರಮುಖ ಮೀನುಗಾರಿಕೆ ಕಾರ್ಯಕ್ರಮ ಮತ್ಸ್ಯ ಮೇಳದಲ್ಲಿ 100ಕ್ಕೂ ಹೆಚ್ಚು ವಿಲಕ್ಷಣ ಮತ್ತು ಸ್ಥಳೀಯ...

ಡಿಸೆಂಬರ್ 8ರಿಂದ 4 ದಿನಗಳ ಕಾಲ ಬೆಂಗಳೂರಿನಲ್ಲಿ ಮತ್ಸ್ಯ ಮೇಳ
ಮತ್ಸ್ಯ ಮೇಳ
Published On :
ಬೆಂಗಳೂರು: ನಗರದಲ್ಲಿ ಡಿಸೆಂಬರ್ 8ರಿಂದ ಪ್ರಾರಂಭಗೊಳ್ಳಲಿರುವ ಕರ್ನಾಟಕದ ಪ್ರಮುಖ ಮೀನುಗಾರಿಕೆ ಕಾರ್ಯಕ್ರಮ ಮತ್ಸ್ಯ ಮೇಳದಲ್ಲಿ 100ಕ್ಕೂ ಹೆಚ್ಚು ವಿಲಕ್ಷಣ ಮತ್ತು ಸ್ಥಳೀಯ ಮೀನುಗಳ ಪ್ರಭೇದಗಳು ಪ್ರದರ್ಶನಗೊಳ್ಳಲಿವೆ. 
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮುಂದಿನ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಮತ್ಸ್ಯ ಮೇಳ ಪ್ರಾರಂಭಗೊಳ್ಳಲಿದೆ ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಮೀನುಗಾರಿಕೆ ಇಲಾಖೆಯ ಆರು ದಶಕಗಳ ಪೂರ್ವಾವಧಿಯನ್ನು ಈ ಮತ್ಸ್ಯ ಮೇಳ ಪೂರ್ಣಗೊಳಿಸುತ್ತದೆ. ಜತೆಗೆ ಸಾರ್ವಜನಿಕರು, ರೈತರು ಮತ್ತು ಮೀನುಗಾರರೊಂದಿಗೆ ಕೈಗಾರಿಕೆಗಳು ಮತ್ತು ಸಂಸ್ಥೆಗಳನ್ನು ಸಂಪರ್ಕಿಸುವ ಉದ್ದೇಶವನ್ನು ಈ ಮತ್ಸ್ಯ ಮೇಳ ಹೊಂದಿದೆ ಎಂದರು. 
ಈ ಮತ್ಸ್ಯ ಮೇಳದಲ್ಲಿ ಅಲಂಕಾರಿಕ ಮೀನಿನ ಗ್ಯಾಲರಿ, ಅಲಂಕಾರಿಕ ಮೀನು ಸ್ಪರ್ಧೆಗಳು, ಸಿದ್ದ ಆಹಾರ, ಮೀನಿನ ಅಡುಗೆ ಸ್ಪರ್ಧೆಗಳು ಮತ್ತು ಮೀನುಗಳ ಮಾರಾಟವನ್ನು ಮಾಡಲಾಗುವುದು ಈ ಮೇಳಕ್ಕೆ ನಾಲ್ಕು ಲಕ್ಷ ಮಂದಿ ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗುತ್ತದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.