ರಾಜ್ಯ

ಹಾಸಿಗೆ ಮೇಲೆ ಮೂತ್ರ ಮಾಡುತ್ತಾನೆಂದು ಮಗನ ಮರ್ಮಾಂಗಕ್ಕೆ ರಬ್ಬರ್ ಬ್ಯಾಂಡ್ ಕಟ್ಟಿದ ಕ್ರೂರಿ ತಂದೆ!

ರಾತ್ರಿ ಮಲಗಿದ್ದಾಗ ಹಾಸಿಗೆ ಮೇಲೆ ಮೂತ್ರ ಮಾಡುತ್ತಾರೆಂದು ಮಗ ಮರ್ಮಾಂಗಕ್ಕೆ ಕ್ರೂರಿ ತಂದೆಯೊಬ್ಬ ರಬ್ಬರ್ ಕಟ್ಟುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ...

ಹಾಸಿಗೆ ಮೇಲೆ ಮೂತ್ರ ಮಾಡುತ್ತಾನೆಂದು ಮಗನ ಮರ್ಮಾಂಗಕ್ಕೆ ರಬ್ಬರ್ ಬ್ಯಾಂಡ್ ಕಟ್ಟಿದ ಕ್ರೂರಿ ತಂದೆ!
ಸಾಂದರ್ಭಿಕ ಚಿತ್ರ
Published On :
ಮೈಸೂರು: ರಾತ್ರಿ ಮಲಗಿದ್ದಾಗ ಹಾಸಿಗೆ ಮೇಲೆ ಮೂತ್ರ ಮಾಡುತ್ತಾರೆಂದು ಮಗ ಮರ್ಮಾಂಗಕ್ಕೆ ಕ್ರೂರಿ ತಂದೆಯೊಬ್ಬ ರಬ್ಬರ್ ಕಟ್ಟುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. 
ಮೈಸೂರಿನ ಪಿರಿಯಾಪಟ್ಟಣದಲ್ಲಿ ವಾಸವಾಗಿರುವ ನಾಗರಾಜ್ ಎಂಬ ಕ್ರೂರಿ ತಂದೆ ತನ್ನ ನಾಲ್ಕು ವರ್ಷದ ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದಾನೆಂದು ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಕ್ಕೆ ವ್ಯಕ್ತಿಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. 
ಕೂಡಲೇ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಕೂಡಲೇ ಬಾಲಕನಿರುವ ಸ್ಥಳಕ್ಕೆ ಹೋಗಿ ನೋಡಿದ್ದಾರೆ. ಈ ವೇಳೆ ಬಾಲಕನ ಮರ್ಮಾಂಗ ಗಾಯಗೊಂಡಿರುವುದು ಹಾಗೂ ಕೈಗಳು, ಹೊಟ್ಟೆ ಭಾಗದಲ್ಲಿ ಊದಿಕೊಂಡಿರುವುದನ್ನು ಕಂಡು ಆಘಾತಗೊಂಡಿದ್ದಾರೆ. 
ಬಳಿಕ ಬಾಲಕನ್ನು ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ನೀಡಿ ದಿನ ಕಳೆದರೂ ಬಾಲಕನಿಗೆ ಮೂತ್ರ ಮಾಡಲು ಸಾಧ್ಯವಾಗಲಿಲ್ಲ. ನಂತರ ಮೈಸೂರಿನ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಕೌನ್ಸಿಲರ್ ಶ್ವೇತಾ ಹೇಳಿದ್ದಾರೆ. 
ಆನಾರೋಗ್ಯದಿಂದಾಗಿ ಆರೋಪಿ ನಾಗರಾಜ್ ಅವರ ಪತ್ನಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಆರೋಪಿಗೆ ನಾಲ್ಕನೇ ತರಗತಿ ಓದುತ್ತಿರುವ ಮತ್ತೋರ್ವ ಮಗಳಿದ್ದಾಳೆ. ಮಗಳ ಮೇಲೆ ಪ್ರೀತಿ ತೋರಿಸುತ್ತಿದ್ದ ನಾಗರಾಜ್, ಪುತ್ರನ ಕಂಡರೆ ದ್ವೇಷ ಮಾಡುತ್ತಿದ್ದ. ಪತ್ನಿ ಇಟ್ಟುಕೊಂಡಿದ್ದ ಅನೈತಿಕ ಸಂಬಂಧದಿಂದಲೇ ಬಾಲಕ ಜನಿಸಿದ್ದಾನೆಂಬ ಅನುಮಾನ ಇಟ್ಟುಕೊಂಡು ನಾಗರಾಜ್ ಈ ರೀತಿಯಾಗಿ ವರ್ತಿಸುತ್ತಿದ್ದ ಎಂದು ಶ್ವೇತಾ ತಿಳಿಸಿದ್ದಾರೆ. 
ಪ್ರಸ್ತುತ ಆರೋಪಿ ನಾಗರಾಜ್ ವಿರುದ್ಧ ಪೆರಿಯಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕನನ್ನು ರಕ್ಷಣೆ ಮಾಡಿ ಬಾಲಕರ ಬಾಲಮಂದಿರದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.