ಆಗಸ್ಟ್ 20ರಂದು ಮಿಸ್ ದೀವಾ- ಮಿಸ್ ಯೂನಿವರ್ಸ್ ಇಂಡಿಯಾ 2017 ಬೆಂಗಳೂರು ಆಡಿಷನ್
ಮಿಸ್ ದಿವಾ - ಮಿಸ್ ಯೂನಿವರ್ಸ್ ಇಂಡಿಯಾ 2017, ಬೆಂಗಳೂರು ಆಡಿಷನ್ ಆಗಸ್ಟ್ 20ರಂದು ನಡೆಯಲಿದೆ.

ಬೆಂಗಳೂರು: ಮಹಿಳೆಯರಿಗೆ ತಮ್ಮ ಸೌಂದರ್ಯದ ಪ್ರದರ್ಶನಕ್ಕಾಗಿ ಯಮಾಹಾ ಫ್ಯಾಸಿನೋ ಮಿಸ್ ದಿವಾ - ಮಿಸ್ ಯೂನಿವರ್ಸ್ ಇಂಡಿಯಾ 2017, ಆಡಿಷನ್‍ಅನ್ನು ಆಗಸ್ಟ್ 20ರಂದು ಆರಂಭಿಸಲಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವು ಸೌಂದರ್ಯ ಮತ್ತು ಫ್ಯಾಷನ್‍ಅನ್ನು ಮರು ರೂಪಿಸುವ ಮತ್ತು ಪ್ರತಿ ವರ್ಷವೂ ಹೊಸ ಮೈಲಿಗಲ್ಲನ್ನು ಸಾಧಿಸುವಲ್ಲಿ ಮಹತ್ವದ್ದಾಗಿದೆ.
ಮಾಜಿ ಮಿಸ್ ಯೂನಿವರ್ಸ್ ಹಾಗೂ ಬಾಲಿವುಡ್ ನಟಿ ಲಾರಾ ದತ್ತಾ ಮೆಂಟರ್ ಆಗಿದ್ದಾರೆ. ಲಾರಾ ದತ್ತಾ ಹೇಳುವಂತೆ "ದೇಶದ ಯಮಾಹಾ ಫ್ಯಾಸಿನೋ ಮಿಸ್ ದಿವಾ 2017 ಕಂಡುಕೊಳ್ಳುವ ಈ ಮಹತ್ವದ ಪ್ರಯಾಣದ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಹೊಂದಿದ್ದೇನೆ. ದೇಶದ 10 ನಗರಗಳಲ್ಲಿ ಆಡಿಷನ್ ನಡೆಸಲಾಗುತ್ತದೆ. ಭಾರತದ ಸೌಂದರ್ಯವನ್ನು ಇವರು ಪ್ರತಿನಿಧಿಸಲಿದ್ದು, ಆತ್ಮವಿಶ್ವಾಸ, ಬುದ್ಧಿಮತ್ತೆ ಹಾಗೂ ಸರಿಯಾದ ವರ್ತನೆಯನ್ನು ಪ್ರತಿನಿಧಿಸಲಿದ್ದಾರೆ.
ಬಹುನಿರೀಕ್ಷಿತ ಈ ಆಡಿಷನ್‍ಅನ್ನು ಬೆಂಗಳೂರಿನ ನಗರ ಭಾಗದಲ್ಲಿರುವ ಶಾಂಗ್ರಿ ಲಾ ಹೋಟೆಲ್‍ನಲ್ಲಿ ನಡೆಸಲಾಗುತ್ತದೆ. ಇವರು ಸೇವಾ ಸೌಲಭ್ಯ ಮತ್ತು ಕಾರ್ಯಕ್ರಮದ ಸ್ಥಳದ ಪಾಲುದಾರರೂ ಆಗಿದ್ದಾರೆ. ಉದ್ಯಮದ ಪ್ರತಿಷ್ಠಿತರು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರಲಿದ್ದಾರೆ. ಇವರು ವಿವಿಧ ಸುತ್ತುಗಳ ಆಡಿಷನ್ ಆಧರಿಸಿ ತೀರ್ಪು ನೀಡಲಿದ್ದಾರೆ. ರ್ಯಾಂಪ್ ವಾಕ್, ಪರಿಪೂರ್ಣ ದೇಹ, ಸಂವಹನಾ ಕೌಶಲ್ಯಗಳು ಮತ್ತು ಇತರ ಅಂಶಗಳನ್ನು ಆಧರಿಸಿ ಥೀಮ್‍ಗಳನ್ನು ವಿನ್ಯಾಸ ಮಾಡಿ ಪರಿಗಣಿಸಲಾಗುತ್ತದೆ.
ಮಿಸ್ ಯೂನಿವರ್ಸ್‍ನಲ್ಲಿ ಭಾಗವಹಿಸಲು ಈ ವೇದಿಕೆಯು ಅವಕಾಶ ಕಲ್ಪಿಸುತ್ತದೆ. ದೇಶದ ಮಹಿಳೆಯರನ್ನು ಈ ಕಾರ್ಯಕ್ರಮದಲ್ಲಿ ಒಳಗೊಳ್ಳಲು ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಿದ್ದು, ಅಂತಿಮ ಹಂತ ಮುಂಬೈನಲ್ಲಿ ನಡೆಯಲಿದೆ.
2017 ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ ಮತ್ತು ಮಿಸ್ ಯೂನಿವರ್ಸ್‍ಗೆ ಪ್ರವೇಶಿಸಲು ನೀವು ಸಾಮಥ್ರ್ಯ ಹೊಂದಿದ್ದೀರಿ ಎಂದು ನೀವು ಭಾವಿಸಿದ್ದರೆ, ನಿಮ್ಮ ಸುವರ್ಣಾವಕಾಶ ಇಲ್ಲಿದೆ. ಈಗಲೇ ಅರ್ಜಿ ಸಲ್ಲಿಸಿ!
ನಿಮ್ಮ ಚಿತ್ರಗಳು ಹಾಗೂ ಪ್ರೊಫೈಲ್‍ಗಳನ್ನು missindiaorganization@gmail.com ಇಲ್ಲಿಗೆ ಮೇಲ್ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


