ನಾವು ಭಯೋತ್ಪಾದಕರಾ? ಪ್ರವೇಶ ನಿರಾಕರಿಸಿದ ಸಿಆರ್ ಪಿಎಫ್ ಸಿಬ್ಬಂದಿಗೆ ಡಿ.ಕೆ ಸುರೇಶ್ ಪ್ರಶ್ನೆ
ತೀವ್ರ ಅಸಮಾಧಾನಗೊಂಡ ಸುರೇಶ್ ನಾವು ಭಯೋತ್ಪಾದಕರಾ? ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಸಿಬ್ಬಂದಿ ನಿಯೋಜನೆ ಮಾಡುವ ಅಗತ್ಯವಾದರೂ ಏನಿತ್ತು....

Published On :
ಬೆಂಗಳೂರು: ಸಂಸದ ಡಿ.ಕೆ ಸುರೇಶ್ ಸಹೋದರ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಸದಾಶಿವ ನಗರ ಮನೆಗೆ ತೆರಳಲು ಸಿಆರ್ ಪಿಎಫ್ ಸಿಬ್ಬಂದಿ ಅವಕಾಶ ನೀಡಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಸುರೇಶ್ ನಾವು ಭಯೋತ್ಪಾದಕರಾ? ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಸಿಬ್ಬಂದಿ ನಿಯೋಜನೆ ಮಾಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ತಮ್ಮ ಸಹೋದರ ಡಿ.ಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ, ಈ ಸಂಬಂಧ ವಿಚಾರಿಸಿಲು ಬಂದಿದ್ದೇನೆ ಎಂದು ಹೇಳಿದರು. 10 ನಿಮಿಷದ ನಂತರ ಐಟಿ ಅಧಿಕಾರಿಗಳು ಒಪ್ಪಿಗೆ ನೀಡಿದ ನಂತರ ಸಿಆರ್ ಪಿಎಫ್ ಸಿಬ್ಬಂದಿ ಸುರೇಶ್ ಅವರನ್ನು ಶಿವಕುಮಾರ್ ಮನೆಗೆ ತೆರಳಲು ಅವಕಾಶ ನೀಡಿದರು.
ಇದೇ ವೇಳೆ ಜೆಡಿಎಸ್ ಬಂಡಾಯ. ಶಾಸಕರಾದ ಜಮೀರ್ ಅಹ್ಮದ್ ಖಾನ್, ಎಚ್ ಸಿ ಬಾಲಕೃಷ್ಣ ಮತ್ತು ಸಂಸದ ಚಲುವರಾಯ ಸ್ವಾಮಿ ಡಿ.ಕೆ ಶಿವಕುಮಾರ್ ಅವರ ನಿವಾಸದ ಬಳಿ ಆಗಮಿಸಿ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಭಾರತದಲ್ಲಿ ಹಿಟ್ಲರ್ ರೀತಿ ಅಧಿಕಾರ ನಡೆಸುತ್ತಿದ್ದಾರೆ, ಐಟಿ ದಾಳಿ ಸಂಪೂರ್ಣವಾಗಿ ರಾಜಕೀಯ ದುರದ್ದೇಶದಿಂದ ಕೂಡಿದೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
terroristsCRPF Personnelಭಯೋತ್ಪಾದಕರುD K Shivakumarಡಿಕೆ ಶಿವಕುಮಾರ್D K Sureshಐಟಿ ದಾಳಿIT raidಸಿಆರ್ ಪಿಎಫ್ ಸಿಬ್ಬಂದಿಡಿ.ಕೆ ಸುರೇಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


