ರಾಜ್ಯ

ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ: ಮಗಳು ಮತ್ತವಳ ಪ್ರಿಯಕರನ ಕೊಲೆ ಮಾಡಿದ ತಂದೆ

ಮಗಳು ಹಾಗೂ ಆಕೆಯ ಪ್ರಿಯಕರನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆಡಸೂರು ಗ್ರಾಮದಲ್ಲಿ...

ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ: ಮಗಳು ಮತ್ತವಳ ಪ್ರಿಯಕರನ ಕೊಲೆ ಮಾಡಿದ ತಂದೆ
ಸಾಂದರ್ಭಿಕ ಚಿತ್ರ
Published On :
ಬೆಳಗಾವಿ : ಮಗಳು ಹಾಗೂ ಆಕೆಯ ಪ್ರಿಯಕರನನ್ನು  ತಂದೆಯೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆಡಸೂರು ಗ್ರಾಮದಲ್ಲಿ ನಡೆದಿದೆ.
ಕಲ್ಲಮ್ಮ(ಹೆಸರು ಬದಲಾಯಿಸಲಾಗಿದೆ) ಮತ್ತು ಮಂಜುನಾಥ ಪದೇಶ್ವರ್ ಕೊಲೆಯಾದವರು, ಕೊಲೆ ಮಾಡಿದ ತಂಡೆ ಭೀಮಪ್ಪ ಆಡಿನ್ ಪೊಲೀಸರಿಗೆ ಶರಣಾಗಿದ್ದಾನೆ. 
ಪರಸ್ಪರ ಪ್ರೀತಿಸುತ್ತಿದ್ದ ಕಲ್ಲಮ್ಮ ಮತ್ತು ಮಂಜುನಾಥ್ ದೈಹಿಕ ಸಂಬಂಧ ಹೊಂದಿದ್ದರು, ಇದನ್ನು ನೋಡಿದ  ತಂದೆ ಭೀಮಪ್ಪ ತಡರಾತ್ರಿ ಮಗಳು ಪ್ರಿಯಕರನ ಜತೆ ಇರುವುದನ್ನು ಕಂಡು ಇಬ್ಬರನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  
ಕಲ್ಲಮ್ಮ ಮತ್ತು ಮಂಜುನಾಥ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 8 ತಿಂಗಳ ಹಿಂದೆ ಈ ವಿಷಯ ಇಬ್ಬರ ಮನೆಯವರಿಗೆ ತಿಳಿದು ಎಚ್ಚರಿಕೆ ನೀಡಿದ್ದರು. ಇನ್ನು ಮುಂದೆ ಭೇಟಿಯಾಗುವುದಿಲ್ಲ, ಪ್ರೀತಿಯನ್ನು ಕೊನೆಗೊಳಿಸುವುದಾಗಿ ಪೋಷಕರ ಮುಂದೆ ಹೇಳಿದ ಪ್ರೇಮಿಗಳು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಕಲ್ಲಮ್ಮ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಮಂಜುನಾಥ ಕಾಲೇಜು ವ್ಯಾಸಂಗ ಮಾಡುತ್ತಿದ್ದ.
ಬುಧವಾರ ರಾತ್ರಿ ಕಲ್ಲಮ್ಮ ಮಂಜುನಾಥನನ್ನ ಮನೆಗೆ ಆಹ್ವಾನಿಸಿದ್ದಳು. ತನ್ನ ಪೋಷಕರು ಮಲಗಿದ್ದಾರೆಂದು ತಿಳಿದ ಕಲ್ಲಮ್ಮ ಆತನನ್ನು ತನ್ನ ಕೊಠಡಿಗೆ ಕರೆದೊಯ್ದಿದ್ದಳು. ಈ ವೇಳೆ ಇಬ್ಬರನ್ನು ನೋಡಿದ ತಂದೆ ಭೀಮಪ್ಪ ಮಂಜುನಾಥ್ ನನ್ನು ರಸ್ತೆಗೆ ಎಳೆ ತಂದು ಕೊಲೆ ಮಾಡಿದ್ದಾನೆ. ಆತನನ್ನು ರಕ್ಷಿಸುವಂತೆ ಕಲ್ಲಮ್ಮ ಕೂಗಾಡಿದ್ದಾಳೆ. ಈ ವೇಳೆ ಆಕೆಯನ್ನು ಭೀಮಪ್ಪ ಕತ್ತರಿಸಿಕೊಂದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಶರಣಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.