ರಾಜ್ಯ

ಬಾಗೇಪಲ್ಲಿ: ಟೋಲ್ ಸಿಬ್ಬಂದಿ ಮೇಲೆ ಟಿಡಿಪಿ ಸಂಸದನ ಪುತ್ರನಿಂದ ಹಲ್ಲೆ

ಆಂಧ್ರ ಪ್ರದೇಶದ ಸಂಸದ ಕೃಷ್ಣಪ್ಪ ನಿಮ್ಮುಲ ಅವರ ಪುತ್ರ ಅಂಬರೀಷ್ ಸೋಮವಾರ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ...

ಬಾಗೇಪಲ್ಲಿ: ಟೋಲ್ ಸಿಬ್ಬಂದಿ ಮೇಲೆ ಟಿಡಿಪಿ ಸಂಸದನ ಪುತ್ರನಿಂದ ಹಲ್ಲೆ
ಸಾಂದರ್ಭಿಕ ಚಿತ್ರ
Published On :
ಅನಂತಪುರ: ಆಂಧ್ರ ಪ್ರದೇಶದ ಸಂಸದ ಕೃಷ್ಣಪ್ಪ ನಿಮ್ಮುಲ ಅವರ ಪುತ್ರ ಅಂಬರೀಷ್ ಸೋಮವಾರ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ, ರಾಷ್ಟ್ರೀಯ ಹೆದ್ದಾರಿ 7ರ ಟೋಲ್‌ ಪ್ಲಾಜಾದಲ್ಲಿ ವಾಹನ ತಡೆದರು ಎಂಬ ಕಾರಣಕ್ಕಾಗಿ ಆತನ ಬೆಂಬಲಿಗರು ಟೋಲ್‌ ಪ್ಲಾಜಾ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಈ ದೃಶ್ಯಗಳು ಟೋಲ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಸಂಬಂಧ ನಿಮ್ಮಲ ಕುಟುಂಬಸ್ಥರು ಕೂಡ ಟೋಲ್ ಸಿಬ್ಬಂದಿ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ.ಉದ್ದೇಶ ಪೂರ್ವಕವಾಗಿ ತಮ್ಮ ವಾಹನವನ್ನು ತಡೆಹಿಡಿದು ವಾಹನಗಳನ್ನು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂಬರೀಷ್ ತಮ್ಮ ಕುಟುಂಬಸ್ಥರ ಜೊತೆ ಗೊರಾಂಟ್ಲಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಬೆಳಗ್ಗೆ 8.30 ರ ಸುಮಾರಿಗೆ ಬಂದ ವಾಹನವನ್ನು ಟೋಲ್ ಸಿಬ್ಬಂದಿ ತಡೆದು 80 ರು. ಶುಲ್ಕ ನೀಡುವಂತೆ ಕೇಳಿದ್ದಾರೆ. ನಮ್ಮ ಬಳಿ ಎಂಪಿ ಪಾಸ್ ಇದೆ ಹೀಗಾಗಿ ಹಣ ನೀಡುವುದಿಲ್ಲ ಎಂದು ಹೇಳಿದ್ದಾರೆ, ಆದರೆ ಈ ವೇಳೆ ವಾಹನ ತಡೆದ ಸಿಬ್ಬಂದಿ, ಸಂಸದರು ಪ್ರಯಾಣಿಸುವ ವಾಹನಕ್ಕೆ ಮಾತ್ರ ಪಾಸ್ ಅನ್ವಯವಾಗುತ್ತದೆ, ಕುಟುಂಬಸ್ಥರಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ. 
ಇದರಿಂದ  ಅಂಬರೀಷ್ ಮತ್ತು ಅವರ ಸಹೋದರ ಶಿರೀಶ್ ಆಕ್ರೋಶಗೊಂಡಿದ್ದಾರೆ, ಇದಾದೆ ಕೆಲವೇ ಕ್ಷಣಗಳಲ್ಲಿ ಶಿರೀಶ್ ಮತ್ತು ಆತನ ಆರು ಸಹಚರರು ಟೋಲ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಸಂಸದರು ಪುತ್ರರು ಹಾಗೂ ಅವರ ಜೊತೆಗಿದ್ದವರೆಲ್ಲಾ ಸೇರಿ ಟೋಲ್ ಬೂತ್ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ, ದಾಳಿಯಿಂದ ಹೆದರಿದ ಟೋಲಿ ಸಿಬ್ಬಂದಿ ಅಲ್ಲಿಂದ ಓಡಿಹೋಗಿದ್ದಾರೆ,ನಂತರ ಸಂಸದನ ಪುತ್ರನ ಸಹಚರರು ಟೋಲ್ ಬೂತ್ ನ ಕಿಟಕಿ ಗಾಜು, ಕಂಪ್ಯೂಟರ್ ಗಳನ್ನೆಲ್ಲಾ ಒಡೆದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಮಗ ವಿದ್ಯಾವಂತ, ಒಳ್ಳೆಯ ಗುಣವುಳ್ಳವನು ಆತ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಕೃಷ್ಟಪ್ಪ ನಿಮ್ಮಲಾ ತಿಳಿಸಿದ್ದಾರೆ. ಇನ್ನೂ ಪ್ರಕರಣ ಸಂಬಂಧ ಆಂದ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡ ವರದಿ ಕೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.