ರಾಜ್ಯ

56 ಗಂಟೆಗಳ ಸತತ ಕಾರ್ಯಾಚರಣೆ: ಸಾವನ್ನು ಗೆದ್ದು ಬರಲಿಲ್ಲ ಕಾವೇರಿ

ಮೂರು ದಿನಗಳ ನಿರಂತರ ಹೋರಾಟ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸತತ ಪರಿಶ್ರಮ ಬಾಲಕಿ ಕಾವೇರಿಯನ್ನು ಬದುಕಿಸಲಿಲ್ಲ....

56 ಗಂಟೆಗಳ ಸತತ ಕಾರ್ಯಾಚರಣೆ: ಸಾವನ್ನು ಗೆದ್ದು ಬರಲಿಲ್ಲ ಕಾವೇರಿ
ಬಾಲಕಿ ಕಾವೇರಿ ಮೃತದೇಹ ಹೊರತೆಗೆದ ರಕ್ಷಣಾ ತಂಡ
Published On :
ಅಥಣಿ: ಮೂರು ದಿನಗಳ ನಿರಂತರ ಹೋರಾಟ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸತತ ಪರಿಶ್ರಮ ಬಾಲಕಿ ಕಾವೇರಿಯನ್ನು ಬದುಕಿಸಲಿಲ್ಲ. 
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಆರು ವರ್ಷದ ಬಾಲಕಿ ಕಾವೇರಿ ಕೊಳವೆ ಬಾವಿಗೆ ಬಿದ್ದು 3 ದಿನವಾಗಿತ್ತು, ಆಕೆಯನ್ನು ಬದುಕಿಸಲು ಸತತ 56 ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ, 28 ಅಡಿ ಆಳಕ್ಕೆ ಬಿದ್ದಿದ್ದ ಕಾವೇರಿ ದುರಂತ ಅಂತ್ಯ ಕಂಡಿದ್ದಾಳೆ.
ಏಪ್ರಿಲ್ 22 ರಂದು ತನ್ನ ಸೋದರ ಸಂಬಂಧಿಗಳೊಂದಿಗೆ ಕಟ್ಟಿಗೆ ಆಯಲು ಹೋಗಿದ್ದ ಕಾವೇರಿ ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು, ಕಳೆದ ಮೂರು ದಿನಗಳಿಂದ ಆಕೆಯನ್ನು ರಕ್ಷಿಸಲು ಕಾರ್ಯಾಚರಣೆ ನಡೆದಿತ್ತು, ಸೋಮವಾರ ಮಧ್ಯರಾತ್ರಿ ರಕ್ಷಣಾ ತಂಡ ಕಾವೇರಿಯ ಮೃತ ದೇಹವನ್ನು ಹೊರತೆಗೆಯಲಾಯಿತು. ಈ ವೇಳೆ. ಕಾವೇರಿ ಪೋಷಕರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಧ್ಯರಾತ್ರಿ ಮೃತದೇಹವನ್ನ ಹೊರತೆಗೆದ ಬಳಿಕ ಕೊಕಟನೂರಿನ ಆಸ್ಪತ್ರೆಗೆ ಮೃತದೇಹ ತಲುಪಿತು. ಅಲ್ಲಿ ಮರಣೋತ್ತರ ಪರೀಕ್ಷೆ ಆದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಬಾವಿಗೆ ಬಿದ್ದ ಕೆಲವೇ ಗಂಟೆಗಳಲ್ಲಿ ಕಾವೇರಿ ಮೃತ ಪಟ್ಟಿದ್ದಾಳೆಂದು ವೈದ್ಯರು ಶಂಕಿಸಿದ್ದಾರೆ. 300 ಅಡಿ ಆಳವಿದ್ದ ಬೋರ್ ವೆಲ್ ನಲ್ಲಿ 28 ಅಡಿ ಆಳದಲ್ಲಿ ಕಾವೇರಿ ಸಿಕ್ಕಿ ಹಾಕಿಕೊಂಡಿದ್ದಳು. 
ಬೆಳಗಾವಿ ಪೊಲೀಸರು ಜಮೀನು ಮಾಲೀಕನ ವಿರುದ್ಧ ಕೇಸು ದಾಖಲಿಸಿಕೊಳ್ಳಲು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಶಂಕರ್ ಹಿಪ್ಪರಗಿ ಎಂಬಾತ ತನ್ನ ಐದು ಎಕರೆ ಜಮೀನನ್ನು ತನ್ನ ಮಗನ ಹೆಸರಿಗೆ ವರ್ಗಾಯಿಸಿದ್ದ. ಹೀಗಾಗಿ ಪೊಲೀಸರು ತಂದೆ -ಮಗನ ವಿರುದ್ಧ ಕೇಸು ದಾಖಲಿಸುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.