ಗಿಡ ನೆಡುವ ಮೂಲಕ ಮಗಳ ಜನ್ಮದಿನ ಆಚರಿಸುವ ಆದರ್ಶ ಪೋಷಕರು
6 ವರ್ಷದ ಹರಿಣಿ ಸ್ವಾಮಿನಾಥನ್ ಅವರ ಪೋಷಕರು ಮಾತ್ರ ತಮ್ಮ ಮಗಳ ಜನ್ಮದಿನವನ್ನು ಕಳೆದ 6 ವರ್ಷಗಳಿಂದ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡುತ್ತಿದ್ದಾರೆ.

Published On :
ಬೆಂಗಳೂರು: ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಬೆಂಬಳೂರಿನಲ್ಲಿರುವ 6 ವರ್ಷದ ಹರಿಣಿ ಸ್ವಾಮಿನಾಥನ್ ಅವರ ಪೋಷಕರು ಮಾತ್ರ ತಮ್ಮ ಮಗಳ ಜನ್ಮದಿನವನ್ನು ಕಳೆದ 6 ವರ್ಷಗಳಿಂದ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡುತ್ತಿದ್ದಾರೆ.
ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುವ ಸ್ವಾಮಿನಾಥನ್ ಅವರು ತಮ್ಮ ಮಗಳ ಪ್ರತಿ ವರ್ಷದ ಜನ್ಮದಿನದ ಆಚರಣೆಯಲ್ಲೂ 111 ಗಿಡ ನೆಡುತ್ತಾರೆ. 2012 ರಿಂದ ಅಂದರೆ ತಮ್ಮ ಮಗಳಿಗೆ 2 ವರ್ಷ ತುಂಬಿದಾಗಿನಿಂದ ಸ್ವಾಮಿನಾಥನ್ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಹವ್ಯಾಸ ಹೊಂದಿದ್ದಾರೆ.
ಗುರು ಮಹತ್ರಿಯ ರಾ ಅವರ ಉಪನ್ಯಾಸ ಕೇಳಿದಾಗಿನಿಂದ 11 ಸಂಖ್ಯೆಯ ಮಹತ್ವದ ಬಗ್ಗೆ ಆಕರ್ಷಿತರಾಗಿರುವ ಸ್ವಾಮಿನಾಥನ್ ಪ್ರತಿ ವರ್ಷವೂ 111 ಗಿಡಗಳನ್ನು ನೆಡುವ ಸಂಕಲ್ಪ ಮಾಡಿದರಂತೆ. ಹರಿಣಿಯ ಮೊದಲ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದೆವು. ಆ ನಂತರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು 2005 ರಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ವಾಸಿಸುತ್ತಿರುವ ಸ್ವಾಮಿನಾಥನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


