ರಾಜ್ಯ

ಬೆಂಗಳೂರು: ಊಟದ ವಿಚಾರಕ್ಕಾಗಿ ಮುರಿದು ಬಿದ್ದ ಮದುವೆ

ವರನ ಕಡೆ ಜನರಿಗೆ ಊಟ ಕಡಿಮೆ ಆಯಿತೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಪಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

ಬೆಂಗಳೂರು: ಊಟದ ವಿಚಾರಕ್ಕಾಗಿ ಮುರಿದು ಬಿದ್ದ ಮದುವೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ವರನ ಕಡೆ ಜನರಿಗೆ ಊಟ ಕಡಿಮೆ ಆಯಿತೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಪಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೋಣನಕುಂಟೆಯ ಸೌಧಾಮಿನಿ ಛತ್ರದಲ್ಲಿ ನಾಗೇಂದ್ರ ಪ್ರಸಾದ್‌‌ ಮತ್ತು ಶಿಲ್ಪಾ ಎಂಬ ಜೋಡಿಯ ಮದುವೆ ನಿಗದಿಯಾಗಿತ್ತು. ನಿನ್ನೆ ಅರತಕ್ಷತೆ ನಡೆದಿದ್ದು, ಈ ವೇಳೆ ವರನ ಕಡೆಯ ಮೂವತ್ತು ಜನರಿಗೆ ಊಟ ಕಡಿಮೆಯಾಗಿದೆ ಎನ್ನಲಾಗಿದೆ.ಇದರಿಂದ ಗಲಾಟೆ ಆರಂಭಿಸಿಜವರನ ಕಡೆಯವರು ಊಟದ ವಿಚಾರವಾಗಿ ಹೆಣ್ಣಿನ ಮನೆಯವರ ಜೊತೆ ಗಲಾಟೆ ಆರಂಭಿಸಿದ್ದಾರೆ. 
ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಗೆ ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೆ, ಅದಕ್ಕೆ ಒಪ್ಪದ ವರ ನಾಗೇಂದ್ರ ಮತ್ತು ಆತನ ಸಂಬಂಧಿಗಳು ಮದುವೆ ನಿರಾಕರಿಸಿದ್ದಾರೆ. ಊಟದ ವಿಚಾರವಾಗಿ ಹೀಗೆ ಮಾಡುವವರು ಹುಡುಗಿಯನ್ನು ಕೊಡುವುದು ಬೇಡವೆಂದು ವಧುವಿನ ಕಡೆವರು ಮದುವೆಯನ್ನೇ ರದ್ದು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.