ಮೈಸೂರು: ಕಲುಷಿತ ನೀರು ಕುಡಿದು ಆನೆ ಸಾವು
ಕಲುಷಿತ ನೀರು ಕುಡಿದ ಪರಿಣಾಮ ಆನೆಯೊಂದು ಸಾವನ್ನಪ್ಪಿರುವ ಘಟನೆ ಬಿಳಿಗಿರಿ ರಂಗನಾಥ ದೇವಾಲಯದ ವನ್ಯಜೀವಿ ...

Published On :
ಮೈಸೂರು: ಕಲುಷಿತ ನೀರು ಕುಡಿದ ಪರಿಣಾಮ 40 ವರ್ಷ ವಯಸ್ಸಿನ ಆನೆಯೊಂದು ಸಾವನ್ನಪ್ಪಿರುವ ಘಟನೆ ಬಿಳಿಗಿರಿ ರಂಗನಾಥ ದೇವಾಲಯದ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದಿದೆ.
ಬಾಯಾರಿಕೆ ತಣಿಸಿಕೊಳ್ಳಲು ಬಾಳೆಬರೇ ಟ್ಯಾಂಕ್ ನಲ್ಲಿದ್ದ ಕಲುಷಿತ ನೀರನ್ನು ಆನೆ ಕುಡಿದಿದೆ, ಪರಿಣಾಮ ಅಸ್ವಸ್ಥಗೊಂಡು ಟ್ಯಾಂಕ್ ಒಳಗೆ ಬಿದ್ದು ಸೋಮವಾರ ಸಾವನ್ನಪ್ಪಿದೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಆನೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕ್ರೇನ್ ಬಳಸಿ ಆನೆಯನ್ನು ಟ್ಯಾಂಕ್ ನಿಂದ ಮೇಲೆತ್ತಲಾಗಿದೆ.
ಕಲುಷಿತ ನೀರು ಕುಡಿದ ಪರಿಣಾಮ ಶ್ವಾಸಕೋಶ ಸೋಂಕಿನಿಂದಾಗಿ ಆನೆ ಸಾವನ್ನಪ್ಪಿದೆ ಎಂದು ಎಸಿಎಫ್ ನಾಗರಾಜ್ ತಿಳಿಸಿದ್ದಾರೆ. ಚೆಕ್ ಪೋಸ್ಟ್ ಬಳಿ ಜಿಂಕೆಯೊಂದು ಕೂಡ ಸಾವನ್ನಪ್ಪಿರುವುದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
diedelephantಆನೆಸಾವುcontaminated waterಕಲುಷಿತ ನೀರುBiligirirangantha Temple Wildlife Sanctuaryಬಿಳಿಗಿರಿ ರಂಗನಾಥ ವನ್ಯಜೀವಿ ಅಭಯಾರಣ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


