ರಾಜ್ಯ

ಹೆಸರಾಂತ ಶಿಶುವೈದ್ಯ ಡಾ. ಡಿ.ಜಿ. ಬೆನಕಪ್ಪ ನಿಧನ

ಹೆಸರಾಂತ ಶಿಶುವೈದ್ಯ ಡಾ. ಡಿ.ಜಿ. ಬೆನಕಪ್ಪ ಅವರು ಜಯನಗರದಲ್ಲಿನ ಅವರ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಹೆಸರಾಂತ ಶಿಶುವೈದ್ಯ ಡಾ. ಡಿ.ಜಿ. ಬೆನಕಪ್ಪ ನಿಧನ
ಡಾ. ಡಿ.ಜಿ. ಬೆನಕಪ್ಪ
Published On :

ಬೆಂಗಳೂರು: ಹೆಸರಾಂತ ಶಿಶುವೈದ್ಯ ಡಾ. ಡಿ.ಜಿ. ಬೆನಕಪ್ಪ ಅವರು ಜಯನಗರದಲ್ಲಿನ ಅವರ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಅವರು ಪತ್ನಿ ಸುವರ್ಣ ಬೆನಕಪ್ಪ, ಮಕ್ಕಳಾದ ಆಶಾ ಬೆನಕಪ್ಪ ಮತ್ತು ಡಾ. ನವೀನ್ ಬೆನಕಪ್ಪ ಮತ್ತು ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಎರಡು ಬಾರಿ ಡಾ. ಬಿಸಿ ರಾಯ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಡಾ. ಬೆನಕಪ್ಪ ಅವರು, ದೇಶಾದ್ಯಂತ ಸಾವಿರಾರು ಶಿಶುವೈದ್ಯರಿಗೆ ತರಬೇತಿ ನೀಡಿದ್ದರು. ಬೆನಕಪ್ಪ ಅವರು ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.