ಕಾವೇರಿ ವಿವಾದ: ತನ್ನದೇ ತಪ್ಪುಗಳಿಂದಾಗಿಯೇ ಸಂಕಷ್ಟದಲ್ಲಿ ಸಿಲುಕಿತೆ ಕರ್ನಾಟಕ?
ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ಮಂಗಳವಾರ ಮೂರು ದಿನ ಆರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ನೀಡಿದ ಆದೇಶದಿಂದಾಗಿ ಕರ್ನಾಟಕಕ್ಕೆ ಮತ್ತೆ ..

ಬೆಂಗಳೂರು: ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ಮಂಗಳವಾರ ಮೂರು ದಿನ ಆರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ನೀಡಿದ ಆದೇಶದಿಂದಾಗಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ.
ಈ ಹಿಂದಿನ ಸುಪ್ರಿಂ ಆದೇಶವನ್ನು ಧಿಕ್ಕರಿಸಿದ ರಾಜ್ಯ ಸರ್ಕಾರ ಕಾವೇರಿ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಎಂದು ವಿಧಾನ ಸಭೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿತ್ತು.
ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ನಿರ್ಣಯವನ್ನು ನ್ಯಾಯಾಲಯ ನ್ಯಾಯಾಂಗ ನಿಂದನೆ ಎಂದು ಎಂದು ಹೇಳಿಲ್ಲ, ಆದರೆ ಮುಂದಿನ ವಿಚಾರಣೆವೆರಗೂ ನೀರು ಬಿಡುವಂತೆ ಹೇಳಿರುವುದು, ಆದೇಶವನ್ನು ಪಾಲಿಸಲೇಬೇಕು ಎಂಬುದರ ಬಗ್ಗೆ ಸುಳಿವು ನೀಡಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತನ್ನ ಆದೇಶವನ್ನ ಒಪ್ಪಿಕೊಂಡು ಅದನ್ನು ಪಾಲಿಸುವವರೆಗೂ ನ್ಯಾಯಾಲಯ ಯಾವುದೇ ವಿಚಾರಣೆ ಕೈಗೊಳ್ಳುವುದಿಲ್ಲ, ನಾವು ಸಂಕಷ್ಟದಲ್ಲಿದ್ದೇವೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅಭಿಪ್ರಾಯ ಪಟ್ಟಿದ್ದಾರೆ.
ಒಂದು ವೇಳೆ ನಾವು ನೀರು ಬಿಡದಿದ್ದರೇ ಸಾಂವಿಧಾನಿಕ ಸಂಸ್ಥೆಯ ಗೌರವಕ್ಕೆ ಸವಾಲು ಹಾಕಿದಂತಾಗುತ್ತದೆ. ಆದರೆ ನ್ಯಾಯಪೀಠ ಕಾವೇರಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದೆ. ರಾಜ್ಯ ತನ್ನ ಸರ್ವ ಪಕ್ಷ ನಿಯೋಗ ಕೊಂಡೊಯ್ದು ಪ್ರಧಾನಿ ಭೇಟಿ ಮಾಡಿ, ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸಬೇಕೆಂದು ಒತ್ತಾಯ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಈಗಾಗಲೇ ನ್ಯಾಯಾಂದ ನಿಂದನೆ ಆರೋಪ ಎದುರಿಸಬೇಕಾಗಿರುವ ಸರ್ಕಾರ ಸರಿಯಾದ ಕಾರಣ ನೀಡಿ, ಪೀಠ ಬದಲಿಸುವಂತೆ ಮನವಿ ಮಾಡಲು ಅವಕಾಶವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾದೀಶ ಎಂ ಎಫ್ ಸಲ್ಡಾನಾ ಹೇಳಿದ್ದಾರೆ. ತಮ್ಮ ಕೇಸನ್ನು ಬೇರೆ ನ್ಯಾಯ ಪೀಠಕ್ಕೆ ಬದಲಾಯಿಸುವಂತೆ ಕೇಳಲು ಅವಕಾಶವಿದೆ. ಆದರೆ ಅದಕ್ಕೆ ನೀಡುವ ಕಾರಣ ಮಾತ್ರ ಸಮರ್ಥವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.
ಇನ್ನು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸದಿದ್ದರೇ ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇದಾರೂ ಸಿಎಂ ಆಗಿದ್ದರೇ, ಕೋರ್ಟ್ ನ ಕ್ಷಮೆ ಕೇಳಿ, ನನ್ನನ್ನು ಜೈಲಿಗೆ ಕಳುಹಿಸುವಂತೆ ಕೇಳುತ್ತಿದ್ದೆ , ನಾನು ಜೈಲಿಗೆ ಹೋಗುತ್ತಿದ್ದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


