ಬೆಂಗಳೂರು: 7 ಮದುವೆಯಾಗಿ ಲಕ್ಷಗಟ್ಟಲೇ ಜೀವನಾಂಶ ಸುಲಿಗೆ ಮಾಡುತ್ತಿದ್ದ ಕಿರಾತಕಿ ವಿರುದ್ಧ ದೂರು
ಇದೊಂದು ಅಪರೂಪದ ಪ್ರಕರಣ, 7 ಮಂದಿಯನ್ನು ಮದುವೆಯಾಗಿ ಅವರಿಂದ ಜೀವಾನಾಂಶಕ್ಕಾಗಿ ಲಕ್ಷಗಟ್ಟಲೇ ಹಣ ಸುಲಿಗೆ ಮಾಡುತ್ತಿದ್ದ 30 ವರ್ಷದ ..

ಬೆಂಗಳೂರು: ಇದೊಂದು ಅಪರೂಪದ ಪ್ರಕರಣ, 7 ಮಂದಿಯನ್ನು ಮದುವೆಯಾಗಿ ಅವರಿಂದ ಜೀವಾನಾಂಶಕ್ಕಾಗಿ ಲಕ್ಷಗಟ್ಟಲೇ ಹಣ ಸುಲಿಗೆ ಮಾಡುತ್ತಿದ್ದ 30 ವರ್ಷದ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ.
ಯಾಸ್ಮೀಮ್ ಬಾನು ಎಂಬಾಕೆಯ ವಿರುದ್ಧ ಆಕೆಯ ಮೊದಲ ಪತಿ ಸೈಯ್ಯದ್ ಇರ್ಮಾನ್ ಹಾಗೂ 4ನೇ ಪತಿ ಅಪ್ಝಲ್ ಪಾಶಾ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಥಣಿಸಂದ್ರದಲ್ಲಿರುವ ಸಾರಾಯಿ ಪಾಳ್ಯ ನಿವಾಸಿ ಸೈಯ್ಯದ್ ಇಮ್ರಾನ್ 2007 ರಲ್ಲಿ ಯಾಸ್ಮೀನ್ ಬಾನು ಜೊತೆ ವಿವಾಹವಾಗಿದ್ದ. ಯಾಸ್ಮೀನ್ ಗೆ ಹಲವು ಪುರುಷ ಸ್ನೇಹಿತರು ಇದ್ದರೆಂದು ನಂತರ ತಿಳಿಯಿತು. ಒಮ್ಮೆ ಆಬ್ರಾರ್ ಎಂಬ ಪುರುಷನ ಜೊತೆ ಹೊಗುತ್ತಿದ್ದಾಗೆ ಯಾಸ್ಮೀನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳು. ಕಾರಿನಲ್ಲಿ ಅವರಿಬ್ಬರು ಪರಸ್ಪರ ಚುಂಬಿಸುತ್ತಿರುವುದನ್ನು ನೋಡಿದೆ. ಅಲ್ಲಿಯೇ ಅವರಿಬ್ಬರಿಗೂ ನಾನು ಕಪಾಳಕ್ಕೆ ಹೊಡೆದೆ. ಅದೇ ದಿನ ನನ್ನ ಮನೆಗೆ ತನ್ನ ಸಹಚರರೊಡನೆ ಬಂದ ಅಬ್ರಾರ್ ನನ್ನ ಮೇಲೆ ಹಲ್ಲೆ ನಡೆಸಿದ ಎಂದು ಸೈಯ್ಯದ್ ಇಮ್ರಾನ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಾದ ನಂತರ ಅವರಿಬ್ಬರ ವೈವಾಹಿಕ ಜೀವನ ಅಂತ್ಯಗೊಂಡು, ಯಾಸ್ಮೀನ್ 60 ವರ್ಷದ ಜಾಹೀದ್ ಸೇಟ್ ಎಂಬಾತನನ್ನು ವಿವಾಹವಾಗಿದ್ದಾಳೆ. ನಂತರ ಆರು ತಿಂಗಳಲ್ಲೇ ಆತನಿಗೆ ವಿಚ್ಛೇದನ ನೀಡಿ ಆತನಿಂದ ಸುಮಾರು 11 ಲಕ್ಷ ಹಣ ಪಡೆದಿದ್ದಾಳೆ.
ಅದಾದ ನಂತರ ಗೋವಿಂದಪುರ ನಿವಾಸಿ ಸಿರಾಜ್ ಎಂಬಾತನನ್ನು ವಿವಾಹವಾಗಿ, ನಂತರ ವಿಚ್ಛೇದನ ನೀಡಿ ಆತನಿಂದಲೂ 5.5 ಲಕ್ಷ ಹಣ ವಸೂಲಿ ಮಾಡಿದ್ದಾಳೆ. ಇದಾದ ನಂತರ ಅಫ್ಜಲ್ ಪಾಶಾನನ್ನು ಮದುವೆಯಾದ ಯಾಸ್ಮೀನ್ ಒಂದು ವರ್ಷಗಳ ಕಾಲ ಆತನೊಂದಿಗೆ ಸಂಸಾರ ಮಾಡಿದ್ದಾಳೆ. ಆತನಿಗೂ ವಿಚ್ಛೇದನ ನೀಡಿ ಆತನಿಂದಲೂ 2.5 ಲಕ್ಷ ಜೀವನಾಂಶವಾಗಿ ಹಣ ಸುಲಿಗೆ ಮಾಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
ನನ್ನ ದೊಡ್ಡ ಮಗಳನ್ನು ವಾಪಸ್ ಪಡೆಯಲು ನಾನು ಯಾಸೀನ್ ಗೆ 2.5 ಲಕ್ಷ ಹಣ ನೀಡಿದ್ದೇನೆ. ಆಕೆ ನನ್ನ ಕಿರಿಯ ಮಗಳನ್ನು ಶೋಯೆಬ್ ಎಂಬಾತನಿಗೆ ಮಾರಾಟ ಮಾಡಿದ್ದಾಳೆ ಎಂದು ಇಮ್ರಾನ್ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


