ನ್ಯಾಯಾಂಗದ ಕೆಲಸವೇ ಅಲ್ಲ; ಆದರೂ ತೀರ್ಪು; ಸುಪ್ರೀಂ ತೀರ್ಪಿನ ವಿರುದ್ಧ ಮಾದೇಗೌಡ ಅಸಮಾಧಾನ
ಕಾವೇರಿ ವಿವಾದವೇನಿದ್ದರೂ ನ್ಯಾಯಾಧಿಕರಣದ ಮೂಲಕ ಬಗೆಹರಿಯಬೇಕೇ ಹೊರತು ನ್ಯಾಯಾಂಗದ ಮೂಲಕವಲ್ಲ. ಮದ್ಯಂತರ ಆದೇಶ ನ್ಯಾಯಾಂಗದ ಕೆಲಸವೇ ಅಲ್ಲ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ: ಕಾವೇರಿ ವಿವಾದವೇನಿದ್ದರೂ ನ್ಯಾಯಾಧಿಕರಣದ ಮೂಲಕ ಬಗೆಹರಿಯಬೇಕೇ ಹೊರತು ನ್ಯಾಯಾಂಗದ ಮೂಲಕವಲ್ಲ. ಮದ್ಯಂತರ ಆದೇಶ ನ್ಯಾಯಾಂಗದ ಕೆಲಸವೇ ಅಲ್ಲ ಆದರೂ ನೀರು ಬಿಡುವ ಸಂಬಂಧ ತೀರ್ಪು ನೀಡಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮಾದೇಗೌಡ ಅವರು, ಸುಪ್ರೀಂ ಕೋರ್ಟ್ ನ ತೀರ್ಪನ್ನು ಮೊದಲೇ ಶಂಕಿಸಿದ್ದೆ. ಕಾವೇರಿ ನದಿ ನೀರು ವಿಚಾರವಾಗಿ ತೀರ್ಪು ನೀಡುವುದು ನ್ಯಾಯಾಂಗದ ಕೆಲಸವಲ್ಲ. ಆದೇನಿದ್ದರೂ ನ್ಯಾಯಾಧಿಕರಣ ಅಥವಾ ಕಾವೇರಿ ಮೇಲುಸ್ತುವಾರಿ ಕೆಲಸವಾಗಿದೆ. ಹೀಗಿದ್ದೂ ನ್ಯಾಯಾಲಯ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಗೆ ಮದ್ಯಂತರ ಅರ್ಜಿಗಳನ್ನು ಸಲ್ಲಿಸುವುದರಿಂದ ಅಥವಾ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದರಿಂದ ಯಾವುದೇ ಲಾಭವಿಲ್ಲ ಎಂದು ಮಾದೇಗೌಡ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


