ರಾಜ್ಯ

ಗೂಗಲ್ ನಿಂದಲೂ ತಪ್ಪು ಮಾಹಿತಿ: "ಕಾವೇರಿ" ತಮಿಳುನಾಡಿನಲ್ಲಿದ್ದಾಳಂತೆ!

ಕಾವೇರಿ ನಮ್ಮದು ಎಂದು ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳು ಬಾಯಿ ಹರಿದುಕೊಂಡು ಬಡಿದುಕೊಳ್ಳುತ್ತಿದ್ದರೆ, ಅತ್ತ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ಮಾತ್ರ ಕಾವೇರಿ ತಮಿಳುನಾಡಿನದ್ದು ಎಂದು ಪ್ರದರ್ಶನ ಮಾಡುತ್ತಿದೆ.

ಗೂಗಲ್ ನಿಂದಲೂ ತಪ್ಪು ಮಾಹಿತಿ: "ಕಾವೇರಿ" ತಮಿಳುನಾಡಿನಲ್ಲಿದ್ದಾಳಂತೆ!
ಗೂಗಲ್ ಅರ್ಥ್ ಯಡವಟ್ಟು ತಮಿಳುನಾಡಿನಲ್ಲಿ ಕಾವೇರಿ
Published On :

ಬೆಂಗಳೂರು: ಕಾವೇರಿ ನಮ್ಮದು ಎಂದು ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳು ಬಾಯಿ ಹರಿದುಕೊಂಡು ಬಡಿದುಕೊಳ್ಳುತ್ತಿದ್ದರೆ, ಅತ್ತ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ಮಾತ್ರ  ಕಾವೇರಿ ತಮಿಳುನಾಡಿನದ್ದು ಎಂದು ಪ್ರದರ್ಶನ ಮಾಡುತ್ತಿದೆ.

ರಕ್ತ ಕೊಟ್ಟೇವು ಆದ್ರೆ ಕಾವೇರಿ ಬಿಡೆವು ಅಂತ ಕನ್ನಡಿಗರು ಹೋರಾಡ್ತಿದ್ರೆ ಅತ್ತ ಗೂಗಲ್ ಸಂಸ್ಥೆ ಮಾತ್ರ ಕಾವೇರಿ ನದಿಯನ್ನು ತಮಿಳುನಾಡಿಗೆ ಸೇರಿಸಿದೆ. ತಾಂತ್ರಿಕ ತೊಂದರೆಯೋ ಅಥವಾ  ಗೂಗಲ್ ಸಂಸ್ಥೆಯ ಸ್ಯಾಟಲೈಟ್ ಯಡವಟ್ಟೂ ಅಂತೂ ಪ್ರಸ್ತುತ ಕಾವೇರಿ ನದಿಯನ್ನು ತಮಿಳುನಾಡಿಗೆ ಸೇರಿಸಲಾಗಿದೆ. ಗೂಗಲ್ ಆರ್ಥ್ ನಲ್ಲಿ ಕಾವೇರಿ ನದಿ ಎಂದು ಟೈಪಿಸಿದರೆ, ನದಿಯ  ಲ್ಯಾಂಡ್ ಮಾರ್ಕ್ ತಮಿಳುನಾಡಿನಲ್ಲಿ ಇರುವಂತೆ ತೋರಿಸುತ್ತಿದೆ.

ಈ ಹಿಂದೆಯೂ ಕೂಡ ಭಾರತದ ಅರುಣಾಚಲ ಪ್ರದೇಶವನ್ನು ಚೀನಾಕ್ಕೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ ಮೂಲಕ ಭಾರತದ ಕೆಂಗಣ್ಣಿಗೆ ಗೂಗಲ್ ಗುರಿಯಾಗಿದ್ದ  ಗೂಗಲ್ ಬಳಿಕ ತನ್ನ ತಪ್ಪನ್ನು ತಿದ್ದಿಕೊಂಡಿತ್ತು. ಇದೀಗ ಕರ್ನಾಟಕದ ಜೀವನದಿ ಕಾವೇರಿಯನ್ನು ತಮಿಳುನಾಡಿಗೆ ಸೇರಿಸುವ ಮೂಲಕ ಗೂಗಲ್ ಇದೀಗ ಕನ್ನಡಿಗರ ವಿರೋಧ ಕಟ್ಟಿಕೊಂಡಿದೆ. ಗೂಗಲ್ ನ ಈ ಯಡವಟ್ಟು ಪ್ರಸ್ತುತ ಕರ್ನಾಟಕದ ಪರಿಸ್ಥಿತಿಯನ್ನು ಬಿಂಬಿಸುವಂತಿದ್ದು, ನಮ್ಮ ನೆಲದಲ್ಲಿ ಹುಟ್ಟುವ ಕಾವೇರಿಗಾಗಿ ನಾವೇ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.