ಮುರುಡೇಶ್ವರದಲ್ಲಿ ಮೂವರು ಯುವಕರು ಸಮುದ್ರ ಪಾಲು
ಪ್ರವಾಸಕ್ಕೆ ಆಗಮಿಸಿದ್ದ 9 ಮಂದಿಯ ಪೈಕಿ ಮೂವರು ಯುವಕರು ಸಮುದ್ರಪಾಲಾದ ದುರ್ಘಟನೆ ಗುರುವಾರ ಭಟ್ಕಳ...

Published On :
ಕಾರವಾರ: ಪ್ರವಾಸಕ್ಕೆ ಆಗಮಿಸಿದ್ದ 9 ಮಂದಿಯ ಪೈಕಿ ಮೂವರು ಯುವಕರು ಸಮುದ್ರಪಾಲಾದ ದುರ್ಘಟನೆ ಗುರುವಾರ ಭಟ್ಕಳ ತಾಲೂಕಿನ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.
ಮೃತರು ಮಂಡ್ಯದ ಕೆ.ಆರ್.ಪೇಟೆ ನಿವಾಸಿಗಳಾದ ಕುಮಾರ್(20),ಕಾರ್ತಿಕ್ ಮಂಜೇಗೌಡ(19)ಮತ್ತು ಪುನೀತ್ (26) ಎಂದು ಗುರುತಿಸಲಾಗಿದೆ.
ಮಂಡ್ಯದಿಂದ ಒಟ್ಟು 9 ಮಂದಿ ಉತ್ತರ ಕನ್ನಡದ ಪ್ರವಾಸಕ್ಕೆಂದು ಆಗಮಿಸಿದ್ದರು. ಈ ವೇಳೆ ಈಜಲು ಸಮುದ್ರಕ್ಕಿಳಿದ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯುವಕರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


