ಬೆಂಗಳೂರು ನಗರ ಮಾದಕ ವಸ್ತು ಕಳ್ಳ ಸಾಗಣೆ ಕೇಂದ್ರವೇ?
ಬೃಹತ್ ಪ್ರಮಾಣದ ಮಾದಕ ವಸ್ತುಗಳೊಂದಿಗೆ ಬೆಂಗಳೂರು ಮೂಲದ ಸಂಶೋಧಕ ವಿಜ್ಞಾನಿ ಹೈದರಾಬಾದ್ ನಲ್ಲಿ ...

Published On :
ಬೆಂಗಳೂರು: ಬೃಹತ್ ಪ್ರಮಾಣದ ಮಾದಕ ವಸ್ತುಗಳೊಂದಿಗೆ ಬೆಂಗಳೂರು ಮೂಲದ ಸಂಶೋಧಕ ವಿಜ್ಞಾನಿ ಹೈದರಾಬಾದ್ ನಲ್ಲಿ ಬಂಧಿತನಾದ ನಂತರ ಮಾದಕವಸ್ತು ನಿಯಂತ್ರಣ ದಳ, ವಿಜ್ಞಾನಿಯು ಮಾದಕ ವಸ್ತುಗಳನ್ನು ಏಷ್ಯಾ ಮತ್ತು ಆಫ್ರಿಕಾ ದೇಶಗಳಿಗೆ ಕಳ್ಳಸಾಗಣೆ ಮಾಡಲು ಬೆಂಗಳೂರನ್ನು ಸಾಗಾಟದ ಕೇಂದ್ರವನ್ನಾಗಿ ಬಳಸಿಕೊಂಡಿದ್ದನೇ ಎಂದು ತನಿಖೆ ನಡೆಸುತ್ತಿದೆ.
ಎಲೆಕ್ಟ್ರಾನಿಕ್ ಸಿಟಿಯ ಹತ್ತಿರ ಹೆಬ್ಬಗೋಡಿ ಎಂಬಲ್ಲಿನ ನಿವಾಸಿ ಸಂಶೋಧಕ ವಿಜ್ಞಾನಿ ವೆಂಕಟ ರಾಮ ರಾವ್ ಕಳೆದ ಸೆಪ್ಟೆಂಬರ್ 30ರಂದು 221 ಕೆಜಿ ಆಂಫೆಟಮೈನ್ ಎಂಬ ಮಾದಕವಸ್ತುವನ್ನು ಬೆಂಗಳೂರಿಗೆ ಸಾಗಿಸುತ್ತಿರುವಾಗ ಸಿಕ್ಕಿಬಿದ್ದಿದ್ದನು. ಪೊಲೀಸರು ನಂತರ ಆತನ ಪತ್ನಿ ಪ್ರೀತಿಯನ್ನು ಕೂಡ ಬಂಧಿಸಿದ್ದರು. ಆಕೆ ತನ್ನ ಪತಿಗೆ ಈ ಕೆಲಸದಲ್ಲಿ ನೆರವಾಗುತ್ತಿದ್ದಳು. ಡ್ರಗ್ ವ್ಯಾಪಾರಿಯೊಬ್ಬನನ್ನು ಚೆನ್ನೈಯಲ್ಲಿ ಬಂಧಿಸಿದ ನಂತರ ಅವನ ಮೂಲಕ ಈ ದಂಪತಿಯ ಮಾಹಿತಿ ಸಿಕ್ಕಿ ಎರಡು ತಿಂಗಳು ಕಳೆದ ನಂತರ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದರು. ವೆಂಕಟ್ ಗೆ ಈ ಕೆಲಸದಲ್ಲಿ ನೆರವಾಗುತ್ತಿದ್ದ ರವಿ ಶಂಕರ್ ರಾವ್ ನನ್ನು ಹೈದರಾಬಾದಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ವೆಂಕಟ್ ಮತ್ತು ಆತನ ಪತ್ನಿಯನ್ನು ಬಂಧಿಸಿದ ನಂತರ, ಮಾದಕ ವಸ್ತುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸುವ ಜಾಲ ಬೆಂಗಳೂರನ್ನು ಸಾಗಾಟದ ಕೇಂದ್ರ ಸ್ಥಳವಾಗಿ ಮಾಡಿಕೊಂಡಿದೆಯೇ ಎಂಬ ಅನುಮಾನ ಪೊಲೀಸರನ್ನು ಕಾಡಲಾರಂಭಿಸಿದೆ.
ಹಿಂದೆಲ್ಲಾ ಮುಂಬೈ ನಗರಿ ಮಾದಕ ವಸ್ತುಗಳ ಕಳ್ಳ ಸಾಗಾಟಕ್ಕೆ ಬಹು ಮುಖ್ಯ ತಾಣವಾಗಿತ್ತು, ಆದರೆ ಇತ್ತೀಚೆಗೆ ಅಲ್ಲಿ ಭಯೋತ್ಪಾದಕರ ದಾಳಿಯ ಬೆದರಿಕೆ, ಅಸುರಕ್ಷತೆಯಿರುವುದರಿಂದಾಗಿ ಕರ್ನಾಟಕ ಅದರಲ್ಲೂ ಬೆಂಗಳೂರು ಮೂಲಕ ವಿದೇಶಗಳಿಗೆ ಕಳುಹಿಸುವುದು ಸುಲಭ ಎಂದು ಕಂಡುಕೊಂಡಿದ್ದಾರೆ. ಇಲ್ಲಿಂದ ಮಾದಕ ವಸ್ತುಗಳು ಹಡಗು, ವಿಮಾನಗಳ ಮೂಲಕ ಕರಾವಳಿ ಭಾಗವಾಗಿ ಗೋವಾ ಮತ್ತು ವಿದೇಶಗಳಿಗೆ ಕಳುಹಿಸುವುದು ಸುಲಭ. ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಮಾದಕ ವಸ್ತುಗಳ ಕಳ್ಳ ಸಾಗಣೆ ಜಾಲ ಹರಡಿರಬೇಕು ಅನಿಸುತ್ತದೆ ಎನ್ನುತ್ತಾರೆ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು. ಅಧಿಕಾರಿಗಳು ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


