ರಾಜ್ಯ

ಬೆಂಗಳೂರು: ಹೆಂಡತಿ ಮೇಲಿನ ಕೋಪಕ್ಕೆ ಇಬ್ಬರು ಮಕ್ಕಳನ್ನ ಬಡಿದು ಕೊಂದ ತಂದೆ

ಹೆಂಡತಿಯ ಮೇಲಿನ ಕೋಪದಿಂದ ತನ್ನ ಇಬ್ಬರು ಮಕ್ಕಳನ್ನ ತಂದೆಯೇ ಹೊಡೆದು ಕೊಂದಿರುವ ಘಟನೆ ನಗರದ ಸುಬ್ರಮಣ್ಯಪುರ ಠಾಣೆಯ ಬೀರೇಶ್ವರ ನಗರದಲ್ಲಿ ...

ಬೆಂಗಳೂರು: ಹೆಂಡತಿ ಮೇಲಿನ ಕೋಪಕ್ಕೆ ಇಬ್ಬರು ಮಕ್ಕಳನ್ನ  ಬಡಿದು ಕೊಂದ ತಂದೆ
ಮಕ್ಕಳನ್ನು ಕಳೆದುಕೊಂಡು ರೋಧಿಸುತ್ತಿರುವ ಜ್ಯೋತಿ
Published On :

ಬೆಂಗಳೂರು: ಹೆಂಡತಿಯ ಮೇಲಿನ ಕೋಪದಿಂದ ತನ್ನ ಇಬ್ಬರು ಮಕ್ಕಳನ್ನ ತಂದೆಯೇ ಹೊಡೆದು ಕೊಂದಿರುವ ಘಟನೆ ನಗರದ ಸುಬ್ರಮಣ್ಯಪುರ ಠಾಣೆಯ ಬೀರೇಶ್ವರ ನಗರದಲ್ಲಿ ನಡೆದಿದೆ.

5 ವರ್ಷದ ಶಿವಶಂಕರ್ ಮತ್ತು 4 ವರ್ಷದ ಆದಿತ್ಯ ಮೃತ ಮಕ್ಕಳು. ಜ್ಯೋತಿಯ ಪತಿ ಸತೀಶ್ ಕುಮಾರ್ ತನ್ನ ಇಬ್ಬರು ಮತ್ತಳನ್ನ ಹೊಡೆದುಕೊಂದು ಪರಾರಿಯಾಗಿದ್ದಾನೆ.

ಬೀದರ್ ನ ಹುಮ್ನಾಬಾದ್ ನ ಸತೀಶ್‌, ಜ್ಯೋತಿ ಎಂಬುವರನ್ನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಯು ಇಬ್ಬರು ಮಕ್ಕಳ ಜತೆ ಬೀರೇಶ್ವರನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ಲಂಬರ್ ಕೆಲಸ ಮಾಡುವ ಸತೀಶ್ ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ವ್ಯಯಿಸುತ್ತಿದ್ದ. ಮನೆ ಕೆಲಸ ಮಾಡುತ್ತಿದ್ದ ಜ್ಯೋತಿ ಸಂಸಾರ ನಿಬಾಯಿಸುತ್ತಿದ್ದಳು.

ಜ್ಯೋತಿ ಅವರು ಬುಧವಾರ ಬೆಳಿಗ್ಗೆ ಮಕ್ಕಳಿಬ್ಬರನ್ನು ಅಂಗನವಾಡಿಗೆ ಬಿಟ್ಟು, ಮನೆಗೆಲಸಕ್ಕೆ ತೆರಳಿದ್ದರು. ನಂತರ ಅಂಗನವಾಡಿಗೆ ತೆರಳಿದ ಆತ ಮಕ್ಕಳನ್ನ ಮನೆಗೆ ಕರೆತಂದು ಕುಡಿದ ಅಮಲಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಪರಾರಿಯಾಗಿದ್ದಾನೆ.

ಮಧ್ಯಾಹ್ನ ಮನೆಗೆ ಬಂದಾಗ ಜ್ಯೋತಿ ಮಕ್ಕಳನ್ನು ನೋಡಿ ಜೋರಾಗಿ ಕಿರುಚಿಕೊಂಡಿದ್ದಾಳೆ. ನೆರೆಹೊರೆಯವರ ಸಹಾಯದಿಂದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.