ರಾಜ್ಯ

ಚಳಿಗಾಲದಲ್ಲೇ ವಿದ್ಯುತ್ ಅಭಾವ: ಈ ಬಾರಿಯ ಬೇಸಿಗೆಯಲ್ಲಿ ಏರಲಿದೆ ಮತ್ತಷ್ಟು ಬಿಸಿ

ಬೇಸಿಗೆಗೂ ಮುನ್ನವೇ ರಾಜ್ಯ ವಿದ್ಯುತ್ ಅಭಾವ ಎದುರಿಸಬೇಕಾಗಿದೆ. ನವೆಂಬರ್ ನಲ್ಲೇ ರಾಜ್ಯದಲ್ಲಿ ಬೇಸಿಗೆಯಲ್ಲಿ ಬಳಸುವಷ್ಟು ವಿದ್ಯುತ್ ಬಳಸಲಾಗುತ್ತಿದೆ....

ಚಳಿಗಾಲದಲ್ಲೇ ವಿದ್ಯುತ್ ಅಭಾವ: ಈ ಬಾರಿಯ ಬೇಸಿಗೆಯಲ್ಲಿ ಏರಲಿದೆ ಮತ್ತಷ್ಟು ಬಿಸಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬೇಸಿಗೆಗೂ ಮುನ್ನವೇ ರಾಜ್ಯ ವಿದ್ಯುತ್ ಅಭಾವ ಎದುರಿಸಬೇಕಾಗಿದೆ. ನವೆಂಬರ್ ನಲ್ಲೇ ರಾಜ್ಯದಲ್ಲಿ ಬೇಸಿಗೆಯಲ್ಲಿ ಬಳಸುವಷ್ಟು ವಿದ್ಯುತ್ ಬಳಸಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಮತ್ತಷ್ಟು ವಿದ್ಯುತ್ ಬಳಕೆ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದ್ದು ಮುಂದಿನ ವರ್ಷದ ಫೆಬ್ರವರಿಯಲ್ಲಿ ವಿದ್ಯುತ್ ಅಭಾವ ತಲೆ ದೋರಲಿದೆ.

ವಿವಿಧ ಸ್ಟೇಷನ್ ಗಳಿಂದ ರಾಜ್ಯ ಸುಮಾರು 200 ಮಿಲಿಯನ್ ಯುನಿಟ್ಸ್ ವಿದ್ಯುತ್ ಒದಗಿಸುತ್ತಿದೆ, ಇದರಲ್ಲಿ ಹೈಡ್ರೋ ಥರ್ಮಲ್ ಕೂಡ ಸೇರಿದೆ.

ಕೆಲವೊಮ್ಮೆ 210 ಮಿಲಿಯನ್ ಯುನಿಟ್ ಬೇಡಿಕೆ ಬರಲಿದ್ದು ಅಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 7 ವರ್ಷಗಳಿಂದ 50,148 ಮಿಲಿಯನ್ ಯುನಿಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ಸುಮಾರು 24,694 ಕೋಟಿ ರು ಹಣ ಖರ್ಚು ಮಾಡಿದೆ. ಇಡೀ ಕರ್ನಾಟಕದಲ್ಲಿ ಪ್ರತಿದಿನ 190 ಮಿಲಿಯನ್ ಯುನಿಟ್ ವಿದ್ಯುತ್ ಬಳಸಲಾಗುತ್ತಿದೆ. ಪೀಕ್ ಅವರ್ಸ್ ನಲ್ಲಿ 9,800 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಬೇಸಿಗೆಯಲ್ಲಿ ಪ್ರತಿದಿನ ಸರಾಸರಿ 200 ಮಿಲಿಯನ್ ಯುನಿಟ್ ವಿದ್ಯುತ್ ಬಳಕೆಯಾಗುತ್ತದೆ.

ಮಳೆ ಕೊರತೆಯಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ.ನೀರಿಗಾಗಿ ರೈತರು ಪಂಪ್ ಸೆಟ್ ಬಳಕೆ ಹೆಚ್ಚು ಮಾಡುತ್ತಿರುವುದು. ತಾಪಮಾನ ಏರಿಕೆಯಾಗಿರುವ ಕಾರಣ ಫ್ಯಾನ್ ಎಸಿ ಬಳಸುತ್ತಿರುವುದು ವಿದ್ಯುತ್ ಬಳಕೆಯ ಪ್ರಮಾಣದಲ್ಲಿ ಏರಿಕೆಯಾಗುವುದಕ್ಕೆ ಕಾರಣವಾಗಿದೆ.

ಮಳೆ ಕೊರತೆಯಿಂದಾಗಿ ಬೇಸಿಗೆಕಾಲದಲ್ಲಿ ಮತ್ತಷ್ಟು ವಿದ್ಯುತ್ ಅಭಾವ ತಲೆದೋರಲಿದ್ದು, ಪವರ್ ಕಟ್ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ವಿದ್ಯುತ್ ಬಳಕೆ ಮಾಡುವಲ್ಲಿ ಸ್ವಲ್ಪ ಮಟ್ಟಿಗಾದರೂ ಶಿಸ್ತು ವಹಿಸಿ ವಿದ್ಯುತ್ ಅನ್ನು ರಕ್ಷಿಸಬೇಕಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.