ರಾಜ್ಯ

ಭಾರತದ ಉದ್ಯಮಕ್ಕೆ ಕರ್ನಾಟಕದ ಮಹಿಳೆಯರಿಂದ ಶೇ.52 ರಷ್ಟು ಕೊಡುಗೆ: ಮಹಿಳಾ ಆಯೋಗ

ದೇಶದ ನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ ಮಹಿಳೆಯರು ಭಾರತೀಯ ಉದ್ಯಮಕ್ಕೆ ಶೇ.51.9 ರಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ..

ಭಾರತದ ಉದ್ಯಮಕ್ಕೆ ಕರ್ನಾಟಕದ ಮಹಿಳೆಯರಿಂದ ಶೇ.52 ರಷ್ಟು ಕೊಡುಗೆ: ಮಹಿಳಾ ಆಯೋಗ
ಲಲಿತಾ ಕುಮಾರ ಮಂಗಳಂ
Published On :

ಬೆಂಗಳೂರು: ದೇಶದ ನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ ಮಹಿಳೆಯರು  ಭಾರತೀಯ ಉದ್ಯಮಕ್ಕೆ ಶೇ.51.9 ರಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ತಿಳಿಸಿದ್ದಾರೆ.

ಥಿಂಕ್ ಬಿಗ್-2016 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಪೋರೇಟ್ ವಲಯದಲ್ಲಿ ಬಂಡವಾಳ ಹೂಡುವುದು ಮಹಿಳೆಯರ ಜವಾಬ್ದಾರಿಯಾಗಿದೆ. ಶೇ, 80ರಷ್ಟು ಮಹಿಳ ಉದ್ಯೋಗಿಗಳಿದ್ದಾರೆ. ಅನೌಪಚಾರಿಕ ವಲಯದಲ್ಲಿ ಶೇ.90ರಷ್ಟು ಮಹಿಳೆಯರು ತೊಡಗಿಕೊಂಡಿದ್ದಾರೆ. ಹೆಚ್ಚಾಗಿ ಕೃಷಿ ವಲಯದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಮಹಿಳೆಯರು ಕೇವಲ ಶೇ.ರಷ್ಟು ಮಾತ್ರ ಆಸ್ತಿ ಹೊಂದಿದ್ದಾರೆ. ಏಕೆಂದರೆ ಮಹಿಳೆಯರಿಗೆ ಬ್ಯಾಂಕ್ ಗಳು ಸಾಲ ನೀಡಲು ನಿರಾಕರಿಸುತ್ತವೆ ಎಂದು ಹೇಳಿದ್ದಾರೆ.

ಮಹಿಳೆಯರು ಕೆಲಸ ಮಾಡುವ ಕೇಂದ್ರಗಳು ಫೇವರ್ ಆಗಿಲ್ಲ, ಬೇರೆಯವರಿಗೆ ಹೊಸತೊಂದನ್ನು ತರಬೇತಿ ನೀಡುವುದರಿಂದ ಅದಕ್ಕಾಗಿ ಹಣ ಮತ್ತು ಸಮಯ ವ್ಯರ್ಥವಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ 2014-19ರ ಹೊಸ ಕೈಗಾರಿಕಾ ನೀತಿ ಮಹಿಳೆಯರಿಗೆ ಉದ್ಯಮದಲ್ಲಿ ಹೆಚ್ಚಿನ ಉತ್ತೇಜನ ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾರೋಹಳ್ಳಿ, ರಾಮನಗರ, ಮತ್ತು ಹುಬ್ಬಳ್ಳಿ ಕೈಗಾರಿಕಾ ಕೇಂದ್ರಗಳು ಮಹಿಳೆಯರಿಗೆ ಜವಳಿ, ರತ್ನಗಳು ಮತ್ತು ಆಭರಣ ತಯಾರಿಕಾ ಉದ್ಯಮ ಮಹಿಳೆಯರಿಗೆ ಸಹಾಯವಾಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.