ನಾನು ನಾಗಿಣಿ, ನಮ್ಮದು ನಾಗಕುಲ, ನಮ್ಮಿಬ್ಬರದ್ದು ಸಾವಿರ ವರ್ಷದ ಸಂಬಂಧ
ನಾವಿಬ್ಬರು ನಾಗಕುಲದವರು, ನಮ್ಮಿಬ್ಬರದ್ದು ಸಾವಿರ ವರ್ಷದ ಸಂಬಂಧ ಎಂದು ಹೇಳಿಕೊಂಡ ಮಹಿಳೆಯೊಬ್ಬಳು ...

ಬೆಂಗಳೂರು: ನಾವಿಬ್ಬರು ನಾಗಕುಲದವರು, ನಮ್ಮಿಬ್ಬರದ್ದು ಸಾವಿರ ವರ್ಷದ ಸಂಬಂಧ ಎಂದು ಹೇಳಿಕೊಂಡ ಮಹಿಳೆಯೊಬ್ಬಳು ಸಾಫ್ಟ್ ವೇರ್ ಎಂಜಿನೀಯರ್ ಗೆ 25 ಲಕ್ಷ ರೂ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುವ ಜೆ.ಪಿ ನಗರದ ನಾಗರಾಜ (ಹೆಸರು ಬದಲಾಯಿಸಲಾಗಿದೆ) ಎಂಬುವರಿಗೆ, ಚಿಕ್ಕಮಗಳೂರು ಮೂಲದ ಮಹಿಳೆ ಕತ್ರಿಗುಪ್ಪೆಯಲ್ಲಿ ವಾಸಿಸುತ್ತಿದ್ದಾಳೆ. ಈಕೆ ಒಂದು ಮಗುವಿನ ತಾಯಿಯಾಗಿರುವ 30 ವರ್ಷದ ಮಹಿಳೆ ನಾಗಿಣಿ (ಹೆಸರು ಬದಲಾಯಿಸಲಾಗಿದೆ) ಮೌಢ್ಯದ ಹೆಸರಲ್ಲಿ ಸುಮಾರು 25 ಲಕ್ಷ ರೂ ಹಣ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.
2010 ರಲ್ಲಿ ನಾಗರಾಜು ಮುಂಬಯಯಿಂದ ಬೆಂಗಳೂರಿಗೆ ಬಂದಿದ್ದರು. ಒಂದು ದಿನ ನಾಗರಾಜ ಮೊಬೈಲ್ ಗೆ ಆಕಸ್ಮಿಕವಾಗಿ ಮಹಿಳೆಯ ಫೋನ್ ಕಾಲ್ ಬಂದಿದೆ.ನಂತರ ಇಬ್ಬರು ಮಾತುಕತೆ ಮುಂದುವರಿಸಿ ಸ್ನೇಹಿತರಾಗಿದ್ದಾರೆ.
ಸ್ವಲ್ಪ ದಿನಗಳ ನಂತರ ನಾನು ಹಾವಾಗಿದ್ದೇನೆ, ನಾನು ನನ್ನ ಇಚ್ಚೆಯಂತೆ ನನ್ನ ರೂಪ ಬದಲಾಯಿಸಿಕೊಳ್ಳಬಲ್ಲೆ ನಮ್ಮಿಬ್ಬರದ್ದು ನಾಗಕುಲ, ನಮ್ಮ ಸಂಬಂಧ ಸಾವಿರ ವರ್ಷದಷ್ಟು ಹಳೇಯದ್ದು, ನಮ್ಮಿಬ್ಬರದ್ದು ಗಾಂದರ್ವ ವಿವಾಹವಾಗಿತ್ತು, ನಾಗಲೋಕದಲ್ಲಿ ಉಂಟಾದ ಕೆಲ ತಪ್ಪುಗಳಿಂದಾಗಿ ನಾವು ಭೂ ಲೋಕಕ್ಕೆ ಬಂದಿದ್ದೇವೆ ಎಂದು ಆತನನ್ನು ನಂಬಿಸಿದ್ದಾಳೆ.
ಆನಂತರ ನೀನು ದೋಷ ಪರಿಹರಿಸಿಕೊಳ್ಳದಿದ್ದರೇ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತನನ್ನು ಭಯಗೊಳಿಸಿದ್ದಾಳೆ. ಜೊತೆಗೆ ಧಾರ್ಮಿಕ ವಿಧಿ ವಿಧಾನಗಳಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಅದಕ್ಕಾಗಿ ಕೆಲ ಪೂಜೆಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿ ಆತನನ್ನು ಹೆದರಿಸಿದ್ದಾಳೆ, 2010 ರಿಂದ 2016 ರವರೆಗೆ ಆಕೆಗೆ ನಾಗರಾಜ ಚಿನ್ನಾಭರಣ ಹಾಗೂ 25 ಲಕ್ಷ ಹಣ ತಂದು ನೀಡಿದ್ದಾನೆ. ತನ್ನ ಪೋಷಕರು ಹಾಗೂ ವಿವಿಧ ಮೂಲಗಳಿಂದ ತಂದ ಹಣವನ್ನು ಆಕೆಗೆ ನೀಡಿದ್ದಾನೆ.
ಮತ್ತೊಬ್ಬ ಮಹಿಳೆಯ ಜೊತೆ ನಾಗರಾಜ್ ಗೆ ನಡೆಯಬೇಕಿದ್ದ ನಿಶ್ಚಿತಾರ್ಥವನ್ನ ತಡೆಯಲು ಯತ್ನಿಸಿದ್ದಾಳೆ. ನಂತರ ನಾಗರಾಜ್ ಗೆ ತಾನು ಮೋಸ ಹೋಗುತ್ತಿರುವ ಬಗ್ಗೆ ಅರಿವು ಮೂಡಿ ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ತಾನು ಮುಗ್ಧೆ ನನಗೇನು ಗೊತ್ತಿಲ್ಲ, ನನ್ನ ವಿರುದ್ಧ ತಪ್ಪು ದೂರು ನೀಡಲಾಗಿದೆ, ಫೋನ್ ನಲ್ಲಿ ನಾಗರಾಜ್ ನನ್ನ ಬಳಿ ಲೈಂಗಿಕಸುಖ ಬಯಸಿದ್ದ ಎಂದು ಹೇಳಿ ನಾಗಿಣಿ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾಳೆ.
ನವೆಂಬರ್ 4 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಕಾರಣ ಮಹಿಳೆಯ ಜಾಮೀನು ಅರ್ಜಿಯನ್ನು ಅಂಗೀಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


