ನೀರಿಗೆ ತತ್ವಾರ: ಬೆಂಗಳೂರಿಗೆ ನೀರು ಹರಿಸುವಿಕೆಯಲ್ಲಿ 65 ದಶಲಕ್ಷ ಲೀಟರ್ ಕಡಿತ
ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತನ್ನ ನಿಗದಿತ ದಿನಕ್ಕೆ ಸಾವಿರದ 400...

Published On :
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತನ್ನ ನಿಗದಿತ ದಿನಕ್ಕೆ ಸಾವಿರದ 400 ದಶಲಕ್ಷ ಲೀಟರ್ ಕಾವೇರಿ ನೀರಿಗೆ ಬದಲಾಗಿ ಅಕ್ಟೋಬರ್ ತಿಂಗಳಿನಿಂದ ಪ್ರತಿ ದಿನಕ್ಕೆ 60ರಿಂದ 65 ಮಿಲಿಯನ್ ಲೀಟರ್ ನೀರನ್ನು ಕಡಿಮೆ ಬಿಡುಗಡೆ ಮಾಡುತ್ತಿದೆ.
ನೀರಿನ ಕೊರತೆಯಿಂದ ಮುಂದೆ ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಮತ್ತು ಕೆಲವು ನೀರು ಯೋಜನೆಗಳಿಗಾಗಿ ಕಾವೇರಿ ನೀರಿನ ಅವಶ್ಯಕತೆಯಿರುವುದರಿಂದ ಈಗಿನಿಂದಲೇ ನೀರು ಬಿಡುಗಡೆ ಮಾಡುವುದನ್ನು ಕಡಿಮೆ ಮಾಡಲಾಗಿದೆ ಎಂದು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೆಂಪರಾಮಯ್ಯ ತಿಳಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಮೊನ್ನೆ ದೀಪಾವಳಿ ಹಬ್ಬವನ್ನು ಹೊರತುಪಡಿಸಿ ಅಕ್ಟೋಬರ್ ತಿಂಗಳಿನಿಂದ ದಿನಕ್ಕೆ ಸಾವಿರದ 335 ಮಿಲಿಯನ್ ಲೀಟರ್ ನಿಂದ ಸಾವಿರದ 340 ಮಿಲಿಯನ್ ಲೀಟರ್ ನಷ್ಟು ಬಿಡುಗಡೆ ಮಾಡುತ್ತಿದ್ದು ನವೆಂಬರ್ ತಿಂಗಳಿನಲ್ಲಿಯೂ ಮುಂದುವರಿಯಲಿದೆ.
ಈ ವರ್ಷ ನೈರುತ್ಯ ಮುಂಗಾರಿನಲ್ಲಿ ಶೇಕಡಾ 18ರಷ್ಟು ಕಡಿಮೆಯಾಗಿದೆ. ಈಶಾನ್ಯ ಮಾರುತ ಕೂಡ ಕ್ಷೀಣವಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ 28 ಮಿಲಿ ಮೀಟರ್ ಮಳೆಯಾಗಿದೆಯಷ್ಟೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕೃಷ್ಣರಾಜ ಸಾಗರದಲ್ಲಿ ಸಾಮರ್ಥ್ಯಕ್ಕಿಂತ 77 ಅಡಿ ನೀರಿನ ಮಟ್ಟ ಕಡಿಮೆಯಾಗಿದ್ದು 124.80 ಅಡಿಗಳಿವೆ.
ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ನಂಬಿಕೊಂಡಿರುವ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈಗಿನಿಂದಲೇ ಕಡಿಮೆ ನೀರನ್ನು ಪೂರೈಸಿ ಅಗತ್ಯವಿದ್ದಾಗ ಹೆಚ್ಚು ನೀರು ಬಿಡುಗಡೆ ಮಾಡಬಹುದು ಎಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಕೆಂಪರಾಮಯ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


