ರಾಜ್ಯ

ದೀರ್ಘ ರಜೆಯ ಬಳಿಕ ಕೆಲಸದ ಮೂಡ್ ಗೆ ಮರಳಿದ ಬೆಂಗಳೂರಿಗರು: ಮತ್ತೆ ಟ್ರಾಫಿಕ್ ಸಮಸ್ಯೆ

ದೀಪಾವಳಿ, ಕರ್ನಾಟಕ ರಾಜ್ಯೋತ್ಸವ ಎಂದು ರಜೆಗಳ ಕಾರಣದಿಂದ ಖಾಲಿಯಾಗಿದ್ದ ಬೆಂಗಳೂರು...

ದೀರ್ಘ ರಜೆಯ ಬಳಿಕ ಕೆಲಸದ ಮೂಡ್ ಗೆ ಮರಳಿದ ಬೆಂಗಳೂರಿಗರು: ಮತ್ತೆ ಟ್ರಾಫಿಕ್ ಸಮಸ್ಯೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ದೀಪಾವಳಿ, ಕರ್ನಾಟಕ ರಾಜ್ಯೋತ್ಸವ ಎಂದು ಸಾಲು ಸಾಲು ರಜೆಗಳ ಕಾರಣ ಖಾಲಿ ಹೊಡೆಯುತ್ತಿದ್ದ ಬೆಂಗಳೂರು ನಗರದ ರಸ್ತೆಗಳ ತುಂಬೆಲ್ಲಾ ಮತ್ತೆ ವಾಹನ ತುಂಬಿಕೊಂಡಿವೆ. ವಾಹನ ಸವಾರರು ಮತ್ತೆ ಟ್ರಾಫಿಕ್ ದಟ್ಟಣೆಯ ಅನುಭವವನ್ನು ಇಂದು ಬೆಳಗ್ಗೆಯಿಂದಲೇ ಅನುಭವಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಾದ ಮೈಸೂರು ರೋಡ್, ಹೊಸೂರು ರಸ್ತೆ, ತುಮಕೂರು ರಸ್ತೆ ಮತ್ತು ಬಳ್ಳಾರಿ ರೋಡ್ ಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಟ್ರಾಫಿಕ್ ಜಾಮ್ ತಲೆದೋರಿದೆ.
ಕಳೆದ ನಾಲ್ಕು ದಿನಗಳಲ್ಲಿ ಸರ್ಕಾರಿ ಕಚೇರಿಗಳು, ಐಟಿ ಕಂಪೆನಿಗಳು, ಶಾಲಾ ಕಾಲೇಜುಗಳು ದೀಪಾವಳಿ ಮತ್ತು ಕರ್ನಾಟಕ ರಾಜ್ಯೋತ್ಸವ ಎಂದು ರಜೆಯಿಂದಾಗಿ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ಸುಗಮವಾಗಿತ್ತು. ಆದರೆ ಇಂದು ಬೆಳಗ್ಗೆ 6 ಗಂಟೆಯಿಂದಲೇ ಟ್ರಾಫಿಕ್ ದಟ್ಟಣೆಯುಂಟಾಗಿದೆ ಎನ್ನುತ್ತಾರೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು.
ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ವಾರಾದ ದಿನಗಳಲ್ಲಿ ಮೆಜೆಸ್ಟಿಕ್, ಔಟರ್ ರಿಂಗ್ ರಸ್ತೆ, ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್, ಗೊರಗುಂಟೆ ಪಾಳ್ಯ, ಹೆಬ್ಬಾಳ, ಮಲ್ಲೇಶ್ವರ, ಚಾಮರಾಜಪೇಟೆ, ಯಶವಂತಪುರ, ರಾಜಾಜಿನಗರ, ವೈಟ್ ಫೀಲ್ಡ್, ಕೆ.ಆರ್.ಪುರಂ, ಮಡಿವಾಳ ಮುಂತಾದ ಕಡೆ ಸಂಚಾರ ದಟ್ಟಣೆ ದಿನನಿತ್ಯ ಇರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.