ನಮ್ಮ ಮೆಟ್ರೋದಿಂದ ಕೋರ್ಟ್ ಗಳ ನಡುವೆ ಓಡಾಟ ಸುಲಭ: ವಕೀಲರಲ್ಲಿ ಅತೀವ ಸಂತಸ
ನಾಲ್ಕು ವಾರಗಳ ರಜೆ ಬಳಿಕ ಕೋರ್ಟ್ ಗಳು ಪುನಾರಂಭಗೊಂಡಿದ್ದು ಈ ಬಾರಿ ವಕೀಲರು ಅತ್ಯಂತ ಸಂತಸಗೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ನಮ್ಮ ಮೆಟ್ರೋ.

ಬೆಂಗಳೂರು: ನಾಲ್ಕು ವಾರಗಳ ರಜೆ ಬಳಿಕ ಕೋರ್ಟ್ ಗಳು ಪುನಾರಂಭಗೊಂಡಿದ್ದು ಈ ಬಾರಿ ವಕೀಲರು ಅತ್ಯಂತ ಸಂತಸಗೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ನಮ್ಮ ಮೆಟ್ರೋ.
ನಾಲ್ಕು ಕೋರ್ಟ್ ಗಳ ಪೈಕಿ ಮೂರು ಕೋರ್ಟ್ ಗಳಿಗೆ ಮೆಟ್ರೋ ಸಂಪರ್ಕವಿದ್ದು, ವಕೀಲರು ಒಂದು ಕೋರ್ಟ್ ನಿಂದ ಮತ್ತೊಂದು ಕೋರ್ಟ್ ಗೆ ಮೆಟ್ರೋ ಮೂಲಕ ಸಂಚರಿಸಲು ಸಾಧ್ಯವಾಗಲಿದೆ. ಹೈಕೋರ್ಟ್ ನ ಮುಂಭಾಗದಲ್ಲಿ ವಿಧಾನಸೌಧ ಮೆಟ್ರೋ ನಿಲ್ದಾಣ, ಸಿಟಿ ಸಿವಿಲ್ ಕೋರ್ಟ್ ನ ಸಮೀಪದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಮೆಟ್ರೋ ರೈಲು ನಿಲ್ದಾಣ, ಮೆಯೋ ಹಾಲ್ ನ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದ ಬಳಿ ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಇರುವುದರಿಂದ ವಕೀಲರಿಗೆ ಸಂಚಾರ ಸುಲಭವಾಗಲಿದೆ. ಹೈಕೋರ್ಟ್ ನಿಂದ ಕಾವೇರಿ ಭವನದ ಬಳಿ ಇರುವ ಸೆಷನ್ಸ್ ಕೋರ್ಟ್ ಗೆ ಹೋಗಲು ನನಗೆ ಕೇವಲ ಅರ್ಧ ನಿಮಿಷಗಳಷ್ಟು ಸಮಯ ತೆಗೆದುಕೊಳ್ಳಲಿದೆ.
ಮೆಟ್ರೋ ಪ್ರಾರಂಭವಾಗುವುದಕ್ಕೂ ಮುನ್ನ ಕಾರು ನಿಲುಗಡೆಗಾಗಿಯೇ ಹೆಚ್ಚಿನ ಸಮಯ ವ್ಯರ್ಥವಾಗುತ್ತಿತ್ತು. ಆದರೆ ಈಗ ಕಾರಿನಲ್ಲಿ ಹೋಗುವ ಅಗತ್ಯವೇ ಇಲ್ಲ ಎಂದು ಅಡ್ವೊಕೆಟ್ ಬಿ ಬಾಲಕೃಷ್ಣ ಹೇಳಿದ್ದಾರೆ. ಅತ್ತಿಗುಪ್ಪೆ ನಿವಾಸಿಯಾಗಿರುವ ವಕೀಲ ಬಿ.ಬಾಲಕೃಷ್ಣ, ಮೇ.2 ರಿಂದ ಮೆಟ್ರೋ ರೈಲಿನಲ್ಲಿ ಸಂಚರಿಸಲು ಪ್ರಾರಂಭಿಸಿದ್ದು, ಮನೆ ಹತ್ತಿರದ ಮೆಟ್ರೋ ನಿಲ್ದಾಣದಿಂದ ನೇರವಾಗಿ ಹೈಕೋರ್ಟ್ ಗೆ ಮೆಟ್ರೋ ಸಂಪರ್ಕ ವಿರುವುದರ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದು. ಇನ್ನು ಮನೆ ಬಳಿ ಮೆಟ್ರೋ ಸಂಪರ್ಕ ಇಲ್ಲದ ವಕೀಲರೂ ಸಹ ಕೋರ್ಟ್ ಗಳಿಗೆ ಸಂಚರಿಸಲು ಮೆಟ್ರೋ ರೈಲನ್ನೇ ಬಳಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


