ವೇತನ ಹೆಚ್ಚಳ ಬೇಡಿಕೆ: ಜೂ.2 ರಂದು 5 ಲಕ್ಷ ರಾಜ್ಯ ಸರ್ಕಾರಿ ನೌಕರರಿಂದ ಸಾಮೂಹಿಕ ರಜೆ
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನೌಕರರಿಗೆ ನೀಡುತ್ತಿರುವ ವೇತನ ಪ್ರಮಾಣದಲ್ಲಿ ಅಸಮಾನತೆಯನ್ನು ವಿರೋಧಿಸಿ 5 ಲಕ್ಷ ರಾಜ್ಯ ಸರ್ಕಾರಿ ನೌಕರರು ಜೂ.2 ರಂದು ರಜೆ ಹಾಕಲಿದ್ದಾರೆ.

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನೌಕರರಿಗೆ ನೀಡುತ್ತಿರುವ ವೇತನ ಪ್ರಮಾಣದಲ್ಲಿ ಅಸಮಾನತೆಯನ್ನು ವಿರೋಧಿಸಿ 5 ಲಕ್ಷ ರಾಜ್ಯ ಸರ್ಕಾರಿ ನೌಕರರು ಜೂ.2 ರಂದು ರಜೆ ಹಾಕಲಿದ್ದಾರೆ.
7 ನೇ ವೇತನ ಆಯೋಗದ ಪ್ರಕಾರ ಕೇಂದ್ರ ಸರ್ಕಾರದ ನೌಕರರಿಗೆ ಶೇ.23 .5 ರಷ್ಟು ವೇತನ ಹೆಚ್ಚಿಸಲಾಗಿದೆಯಾದರೂ, ಸರ್ಕಾರಿ ನೌಕರರು ಇನ್ನೂ ಹೆಚ್ಚಿನ ವೇತನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ವೇತನ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಶೇ.23 .5 ರಷ್ಟು ವೇತನ ಹೆಚ್ಚಿಸಲಾಗಿದ್ದರೂ ರಾಜ್ಯ ಡಿ ಗ್ರೂಪ್ ನೌಕರರಿಗೆ ಹಾಗೂ ಕೇಂದ್ರ ಡಿ ಗ್ರೂಪ್ ನೌಕರರಿಗೆ ನೀಡುತ್ತಿರುವ ವೇತನ ಪ್ರಮಾಣದಲ್ಲಿ ಶೇ.111 .33 ರಷ್ಟು ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ವೇತನ ತಾರತಮ್ಯವನ್ನು ವಿರೋಧಿಸಿ ರಾಜ್ಯ ಸರ್ಕಾರದ 5 ಲಕ್ಷ ನೌಕರರು ಜೂ.2 ರಂದು ಸಾಮೂಹಿಕ ರಜೆ ಹಾಕಲಿದ್ದಾರೆ ಎಂದು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಬಿಪಿ ಮಂಜೇಗೌಡ ಹೇಳಿದ್ದಾರೆ.
ರಾಜ್ಯ ಸರ್ಕಾರದ ನೌಕರರು ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವಷ್ಟೇ ದೈನಂದಿನ ಭತ್ಯೆಯನ್ನು ನೀಡಬೇಕು ಎಂಬುಡು ರಾಜ್ಯ ಸರ್ಕಾರದ ನೌಕರರ ಬೇಡಿಕೆಯಾಗಿದೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹುಬ್ಬಳ್ಳಿಯ ವಿಭಾಗಾದ 63 ಇಲಾಕೆಹಗಳ ಸುಮಾರು 6 ,000 ನೌಕರರು ಜೂ.2 ರಂದು ಸಾಮೂಹಿಕ ರಜೆಹಾಕಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿಪಿ ಮಂಜೇಗೌಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


