3 ವರ್ಷದಲ್ಲಿ ರಾಜ್ಯಾದ್ಯಂತ 3.42 ಲಕ್ಷ ಧೂಮಪಾನಿಗಳ ವಿರುದ್ಧ ಪ್ರಕರಣ ದಾಖಲು
ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಸರ್ಕಾರ ಅರಿವು ಮೂಡಿಸಲು ಎಷ್ಟೇ ಪ್ರಯತ್ನಗಳನ್ನು ಮಾಡುತ್ತಿದ್ದರು. ಧೂಮಪಾನಿಗಳು ಮಾತ್ರ ಸರ್ಕಾರ ತಮಗೆ ಅನ್ವಯಿಸುವುದಿಲ್ಲ...

ಬೆಂಗಳೂರು: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಸರ್ಕಾರ ಅರಿವು ಮೂಡಿಸಲು ಎಷ್ಟೇ ಪ್ರಯತ್ನಗಳನ್ನು ಮಾಡುತ್ತಿದ್ದರು. ಧೂಮಪಾನಿಗಳು ಮಾತ್ರ ಸರ್ಕಾರ ತಮಗೆ ಅನ್ವಯಿಸುವುದಿಲ್ಲ ಎಂಬಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಅಗ್ಗಿಲ್ಲದೆ ಧೂಮಪಾನ ಮಾಡುತ್ತಿದ್ದಾರೆ.
ಮೇ.31 ರಂದು ವಿಶ್ವದಾದ್ಯಂತ ಧೂಪಮಾನ ನಿಷೇಧ ದಿನವನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಧೂಮಪಾನ ಹಾಗೂ ಮದ್ಯಪಾನ ಕುರಿತಂತೆ ಅರಿವು ಮೂಡಿಸಲು ಹಾಗೂ ಧೂಮಪಾನವನ್ನು ಹೋಗಲಾಡಿಸಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಪ್ರಕಾರ ಸಾರ್ವಜನಿಕ ಪ್ರದೇಶ ಹಾಗೂ ಕಚೇರಿಗಳಲ್ಲಿ ಧೂಮಪಾನ ಮಾಡುವುದು. ತಂಬಾಕು ಉತ್ಪನ್ನಗಳ ಜಾಹೀರಾತು ನೀಡುವುದು, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು. ಶಾಲಾ ಕಾಲೇಜುಗಳ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು. ಇತರೆ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಚಿತ್ರಗಳಿಂದ ಕೂಡಿದ ಎಚ್ಚರಿಕೆಯನ್ನು ಹಾಕದೆ ಮಾರಾಟ ಮಾಡುವುದು ಅಪರಾಧವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ, ರಸ್ತೆಗಳು, ರೈಲ್ವೆ ನಿಲ್ದಾಣ, ಕ್ಯಾಂಟೀನ್, ಹೋಟೆಲ್, ಅಂಗಡಿ ಮಳಿಗೆಗಳು, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯ ಮತ್ತಿತರ ಸ್ಥಳಗಳನ್ನು ಸಾರ್ವಜನಿಕ ಸ್ಥಳಗಳೆಂದು ಹೇಳಾಗಿದೆ. ಆದರೆ, ಸರ್ಕಾರ ನಿಯಮಗಳಿಗೆ ಲೆಕ್ಕಿಸಿದ ಧೂಪಪಾನಿಗಳು ಮಾತ್ರ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನವನ್ನು ಮಾಡುತ್ತಿದ್ದಾರೆ.
ವರದಿಗಳು ತಿಳಿಸಿರುವ ಪ್ರಕಾರ ರಾಜ್ಯದಲ್ಲಿ ಶೇ.28 ರಷ್ಟು ಧೂಮಪಾನ ವ್ಯಸನಿಗಳಿದ್ದು, 3 ವರ್ಷದಲ್ಲಿ ರಾಜ್ಯದಾದ್ಯಂತ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಿದ್ದಾರೆಂದು 3.42 ಲಕ್ಷ ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇದರಂತೆ ಧೂಮಪಾನ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದವರ ಬಳಿ ಸರ್ಕಾರ ಈ ವರೆಗೂ ರು.4.64 ಕೋಟಿ ಹಣವನ್ನು ದಂಡವಾಗಿ ಪಡೆದಿದೆ.
ಧೂಮಪಾನ ವ್ಯಸನಿಗಳ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಸಮೀಕ್ಷೆ ನಡೆಸಿದ್ದು, ಸಮೀಕ್ಷಾ ವರದಿಯಲ್ಲಿ ದೇಶದಲ್ಲಿನ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಧೂಮಪಾನ ವ್ಯಸನಿಗಳ ಸಂಖ್ಯೆ ಕಡಿಮೆಯಿದ್ದು, ರಾಜ್ಯದಲ್ಲಿ ಶೇ.28 ರಷ್ಟು ಧೂಮಪಾನ ವ್ಯಸನಿಗಳಿದ್ದಾರೆಂದು ಹೇಳಿದೆ. ಇದರಂತೆ 19 ವರ್ಷಗಳಿಗೂ ಕಡಿಮೆಯಿರುವ ಯುವಕರು ಹೆಚ್ಚಾಗಿ ಧೂಮಪಾನವನ್ನು ಮಾಡುತ್ತಿದ್ದಾರೆಂದು ಹೇಳಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು, ನಿಯಮಗಳ ಪ್ರಕಾರ ಸಿಗರೇಟ್ ಪ್ಯಾಕ್ ಗಳ ಮೇಲೆ ಶೇ.85ರಷ್ಟು ಭಾಗದಲ್ಲಿ ಎಚ್ಚರಿಕೆ ಚಿತ್ರವನ್ನು ಮುದ್ರಿಸುವಂತೆ ಸೂಚಿಸಲಾಗಿದೆ. ಇದರಲ್ಲಿ ಶೇ.65 ರಷ್ಟು ಚಿತ್ರವಿದ್ದರೆ, ಶೇ.20ರಷ್ಟು ಎಚ್ಚರಿಕೆಯ ಸಂದೇಶ ಮುದ್ರಿಸುವಂತೆ ತಿಳಿಸಲಾಗಿದೆ. ಹೊಸ ಪ್ಯಾಕ್ ಗಳ ಮೇಲಿನ ಸಂದೇಶದಿಂದಾಗಿ ಧೂಮಪಾನಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ನಮಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಸ್ಥಳೀಯ ಪೊಲೀಸರು ಹಾಗೂ ಇನ್ನಿತರೆ ಅಧಿಕಾರಿಗಳ ಸಹಾಯದಿಂದ ಸಾರ್ವಜನಿಕ ಪ್ರದೇಶದಲ್ಲಿ ಧೂಪಮಾನ ಮಾಡಿದ 3,07,946 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು ಪ್ರಕರಣ ದಾಖಲಾದವರ ಬಳಿ ಧೂಪಮಾನ ನಿಷೇಧ ಕಾಯ್ದೆಯಡಿಯ ಪ್ರಕಾರ ರು.200ನ್ನು ದಂಡವಾಗಿ ಪಡೆಯಲಾಗುತ್ತದೆ ಎಂದು ಜಂಟಿ ನಿರ್ದೇಶಕ ಡಾ. ರಘುನಂದನ್ ಅವರು ಹೇಳಿದ್ದಾರೆ.
ಇ-ಸಿಗರೇಟ್
ದೇಶದಾದ್ಯಂತ ಸಿಗರೇಟ್ ಮೇಲೆ ನಿಷೇಧ ಹೇರುತ್ತಿದ್ದಂತೆಯೇ, ಧೂಮಪಾನ ವ್ಯಸನಿಗಳಿಗಾಗಿ ಹುಟ್ಟಿಕೊಂಡ ಹೊಸ ಮಾರ್ಗವೇ ಈ ಇ-ಸಿಗರೇಟ್. ಸಾಂಪ್ರದಾಯಿಕ ಸಿಗರೇಟ್ ವ್ಯಸನವನ್ನು ದೂರಾಗಿಸುವ ಸಲುವಾಗಿ ಹುಟ್ಟಿಕೊಂಡ ಇ-ಸಿಗರೇಟ್ ಕೂಡ ಆರೋಗ್ಯಕ್ಕೆ ಹಾನಿಕರವಾಗಿದ್ದು, ಇ-ಸಿಗರೇಟ್ ನಿಂದಲೂ ಕ್ಯಾನ್ಸರ್ ಸಂಭವವಿದೆ ಎಂದು ಇತ್ತೀಚೆಗಷ್ಟೇ ವರದಿಯೊಂದು ಹೇಳಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಇ ಸಿಗರೇಟ್ ನ್ನು ಅಪರಾಧ ಪ್ರಕರಣಗಳನ್ನು ದಾಖಲಿಸಲು ಚಿಂತನೆ ನಡೆಸಿತ್ತು. ಇದರಂತೆ ಕೇಂದ್ರಕ್ಕೂ ಈ ಬಗ್ಗೆ ಪತ್ರವೊಂದನ್ನು ಬರೆದು ಮನವಿ ಮಾಡಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


