ಪ್ರಧಾನಿ ಮೋದಿ ಆಗಮನ: ಹುಬ್ಬಳ್ಳಿಯಲ್ಲಿ ಹೆಚ್ಚಿದ ಭದ್ರತೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಹುಬ್ಭಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಭಾರೀ ಭದ್ರತೆಯನ್ನು ಒದಗಿಸಲಾಗಿದೆ...

ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಹುಬ್ಭಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಭಾರೀ ಭದ್ರತೆಯನ್ನು ಒದಗಿಸಲಾಗಿದೆ.
ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ದಾವಣಗೆರೆಯಲ್ಲಿ ಆಯೋಜಿಸಲಾಗಿರುವ ವಿಕಾಸಪರ್ವ ರ್ಯಾಲಿಯನ್ನುದ್ದೇಶಿಸಿ ಮಾತನಾಡಲು ಮೋದಿಯವರು ಆಗಮಿಸಲಿದ್ದಾರೆ.
ರ್ಯಾಲಿ ನಂತರ ಮೋದಿಯವರು ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಹಿಂತಿರುಗಲಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಾದ್ಯಂತ ಭದ್ರತೆಯನ್ನು ನಿಯೋಜಿಸಲಾಗಿದೆ. ಈಗಾಗಲೇ ನಿಲ್ದಾಣದಲ್ಲಿ ಸೇನಾ ಹೆಲಿಕಾಪ್ಟರ್ ಗಳು ಆಗಮಿಸಿದ್ದು, ನಗರದ ಸುತ್ತಮುತ್ತಲೂ ಸೇನಾ ಪಡೆ ಗಸ್ತು ತಿರುಗುತ್ತಿದ್ದಾರೆ.
ಇನ್ನು ಮೋದಿಯವರು ರಸ್ತೆಯಲ್ಲಿ ಸಂಚಾರ ನಡೆಸುವ ಬಗ್ಗೆ ವೇಳಾಪಟ್ಟಿಯಿಲ್ಲದಿದ್ದರೂ, ಮುಂಜಾಗ್ರತೆವಹಿಸಿರುವ ಹುಬ್ಭಳ್ಳಿ ಹಾಗೂ ಧಾರವಾಡ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ.
ಮೋದಿಯವರು ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಒಳ ಹಾಗೂ ಹೊರ ಭಾಗದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಮತ್ತಷ್ಟು ಹೆಚ್ಚಿನ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸಿಪಿಜಿ ಅಧಿಕಾರಿಗಳೊಂದಿಗೆ ಸ್ಪಂದಿಸುತ್ತಿದ್ದೇವೆ. ಮೋದಿಯವರು ವಿಮಾನಕ್ಕೆ ಬರುವ ಬಗ್ಗೆ ಹಾಗೂ ರಸ್ತೆ ಸಂಚಾರ ಮಾಡುವ ಬಗ್ಗೆ ವೇಳಾಪಟ್ಟಿಯಲ್ಲಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರು ಹೇಳಿದ್ದಾರೆ.
ಬಿಳಿ ಬಣ್ಣ ಕರವಸ್ತ್ರಕ್ಕೆ ಮಾತ್ರ ಅನುಮತಿ
ಇನ್ನು ರ್ಯಾಲಿ ನಡೆಸುತ್ತಿರುವ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರ್ಯಾಲಿಗೆ ಬರುವ ಜನರು ಕೇವಲ ಬಿಳಿ ಬಣ್ಣದ ಕರವಸ್ತ್ರವನ್ನು ಮಾತ್ರ ತರಲು ಅವಕಾಶವನ್ನು ನೀಡಲಾಗಿದೆ ಎಂದು ಡಾ.ಭೀಮಶಂಕರ್ ಅವರು ಹೇಳಿದ್ದಾರೆ.
ರ್ಯಾಲಿಗೆ ಬರುವ ಜನರು ನೀರಿನ ಬಾಟಲಿ, ಬೆಂಕಿ ಪೊಟ್ಟಣ, ಬ್ಯಾಗ್, ಕಣ್ಣಿಗೆ ಹಾಕುವ ಔಷಧಿ ಅಥವಾ ಲೈಟರ್, ಚಾಕು, ಮೊಬೈಲ್ ಫೋನ್ ಗಳು ಹಾಗೂ ಇನ್ನಿತರೆ ರಾಸಾಯನಿಕ ಪದಾರ್ಥಗಳನ್ನು ತೆಗೆದುಕೊಂಡು ಬರಬಾರದು. ಇನ್ನು ರ್ಯಾಲಿ ವೇಳೆಯಾಗಲಿ ಅಥವಾ ಭದ್ರತಾ ತಪಾಸವಣೆ ವೇಳೆ ಜನರು ಪೊಲೀಸರೊಂದಿಗೆ ಅನುಚಿತ ವರ್ತನೆಯನ್ನು ತೋರಬಾರದು.
ಒಂದು ವೇಳೆ ಅನುಮಾನ್ಪದವಾಗಿ ಯಾರಾದರೂ ಕಂಡುಬಂದಿದ್ದೇ ಆದರೆ, ಜನರು ಪೊಲೀಸ್ ಕಂಟ್ರೋಲ್ ರೂಂ ನಂ.100 ಅಥವಾ 08192-253100 ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಭೀಮಶಂಕರ್ ಅವರು ಹೇಳಿದ್ದಾರೆ.
ಇನ್ನು ಭದ್ರತೆಗಾಗಿ 3 ಡಿಸಿಪಿ, 4 ಎಸಿಪಿ, 15 ಸಿಪಿಐ, 23 ಪಿಎಸ್ ಐ, 41 ಎಎಸ್ಐ, 73 ಮುಖ್ಯಪೇದೆಗಳು, 433 ಪೊಲೀಸ್ ಪೇದೆಗಳು, 24 ಮಹಿಳಾ ಪೇದೆಗಳು, 1 ಚನ್ನಮ್ಮ ವಾಹನ, 1 ಶಿವಾಜಿ ವಾಹನ, 7 ಸಿಎಆರ್, 10 ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಮೊದಲು ವಿಶೇಷ ವಿಮಾನದ ಮೂಲಗ ಹುಬ್ಬಳ್ಳಿಗೆ ಆಗಮಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಂತರ ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ತೆರಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


