1,400 ಸೀಟ್ ಗಳನ್ನು ಸರ್ಕಾರದೊಂದಿದೆ ಹಂಚಿಕೊಳ್ಳುವುದಿಲ್ಲ: ಖಾಸಗಿ ಕಾಲೇಜುಗಳು
1,400 ಪದವಿ ವೈದ್ಯ ಮತ್ತು ದಂತ ವೈದ್ಯಕೀಯ ಸೀಟ್ ಗಳನ್ನು ಸರ್ಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಶುಕ್ರವಾರ ಖಾಸಗಿ ಕಾಲೇಜುಗಳು...

ಬೆಂಗಳೂರು: 1,400 ಪದವಿ ವೈದ್ಯ ಮತ್ತು ದಂತ ವೈದ್ಯಕೀಯ ಸೀಟ್ ಗಳನ್ನು ಸರ್ಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಶುಕ್ರವಾರ ಖಾಸಗಿ ಕಾಲೇಜುಗಳು ಹೇಳಿಕೊಂಡಿವೆ.
ಈ ಕುರಿತಂತೆ ಮಾತನಾಡಿರುವ ಕರ್ನಾಟಕ ವೃತ್ತಿಪರ ಕಾಲೇಜುಗಳು ಸಂಘದ ಅಧ್ಯಕ್ಷ ಎಂ.ಆರ್. ಜಯರಾಮ್ ಅವರು, ದೇಶದಲ್ಲಿ ವೈದ್ಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ದೇಶದಲ್ಲಿ ಏಕರೂಪದ ಪರೀಕ್ಷೆ ನೀಟ್ ಜಾರಿಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ ಆದೇಶದಂತೆ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ರಾಜ್ಯ ಸರ್ಕಾರದೊಂದಿಗೆ ಯಾವುದೇ ಸೀಟ್ ಗಳನ್ನು ಹಂಚಿಕೆ ಮಾಡಿಕೊಳ್ಳದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದರಂತೆ 700 ವೈದ್ಯಕೀಯ ಮತ್ತು 700 ದಂತ ವೈದ್ಯಕೀಯ ಸೀಟ್ ಗಳು ರಾಜ್ಯ ಸರ್ಕಾರ ಪಾಲಿಗೆ ಬರುವುದಿಲ್ಲ. ಈ ಸೀಟ್ ಗಳನ್ನು ಸಿಇಟಿ ರ್ಯಾಂಕ್ ಗಳ ಆಧಾರದ ಕರ್ನಾಟಕದ ವಿದ್ಯಾರ್ಥಿಗಳನ್ನು ಭರ್ತಿ ಮಾಡಲಾಗುತ್ತದೆ.
ಶೇ.15ರಷ್ಟು ಸೀಟ್ ಗಳು ಎನ್ಆರ್ ಕೋಟಾಗೆ ಹೋಗಲಿದೆ. ಇನ್ನುಳಿದ ಶೇ.85ರಷ್ಟು ಸೀಟ್ ಗಳು ನೀಟ್ ರ್ಯಾಂಕ್ ನ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು. ಸೀಟುಗಳ ಭರ್ತಿಯಲ್ಲಿ ರಾಜ್ಯ ಕೋಟಾ ಅಥವಾ ಸರ್ಕಾರೀ ಕೋಟಾಗಳಾವುದು ನಮ್ಮ ಸಂಸ್ಥೆಗಳಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮೀಸಲಾತಿ ನೀತಿ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಕಾನೂನು ರೀತಿಯಲ್ಲಿಯೇ ನಾವು ನಡೆಯಲು ಸಿದ್ಧರಿದ್ದು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಜನಾಂಗಕ್ಕೆ ಸೀಟ್ ಗಳನ್ನು ನೀಡಲಾಗುತ್ತದೆ. ಇನ್ನು ಉಚಿತ ವ್ಯವಸ್ಥೆಗಳನ್ನು ಸರ್ಕಾರವೇ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.
ಇನ್ನು ಖಾಸಗೀ ಕಾಲೇಜುಗಳ ಈ ನಿಲುವಿನ ಬಗ್ಗೆ ರಾಜ್ಯ ಸರ್ಕಾರ ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಕಾನೂನು ಸಲಹೆ ಪಡೆಯುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


