ನೀವೂ,ನಿಮ್ಮ ಕುಟುಂಬ ನೂರ್ಕಾಲ ಬಾಳಿ: ಪಾನಮತ್ತ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ
ನೀವು ಮತ್ತು ನಿಮ್ಮ ಕುಟುಂಬದವರು ಚೆನ್ನಾಗಿರಬೇಕು, ನಿಮಗೆ ದೇವರು ಹೆಚ್ಚಿನ ಆರೋಗ್ಯ ಕಲ್ಪಿಸಬೇಕು ಎಂದು ಪಾನಮತ್ತ ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ ...

ಬೆಂಗಳೂರು: ನೀವು ಮತ್ತು ನಿಮ್ಮ ಕುಟುಂಬದವರು ಚೆನ್ನಾಗಿರಬೇಕು, ನಿಮಗೆ ದೇವರು ಹೆಚ್ಚಿನ ಆರೋಗ್ಯ ಕಲ್ಪಿಸಬೇಕು ಎಂದು ಪಾನಮತ್ತ ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾನೆ.
ಬೆಂಗಳೂರಿನಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ನೀಡಲು ಮುಂದಾದ ಘಟನೆ ವರದಿಯಾಗಿದೆ.
ಮಾಗಡಿ ರಸ್ತೆಯ ಅಂಜನಾ ನಗರದ ಸ್ಫೂರ್ತಿಧಾಮದಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ , ಪಾನಮತ್ತ ವ್ಯಕ್ತಿಯೊಬ್ಬ ಪದೇ ಪದೇ ವೇದಿಕೆಯ ಮುಂಬಾಗಕ್ಕೆ ತೆರಳಿ ಸಚಿವರಿಗೆ ಕೈಮುಗಿಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ನೀಡಲು ಮಂದಾಗಿದ್ದಾನೆ. ಪಾನಮತ್ತ ವ್ಯಕ್ತಿಯ ಕಾಟ ತಾಳಲಾರದೇ ವೇದಿಕೆಯಲ್ಲಿದ್ದ ಮುಖಂಡರು ಪತ್ರವನ್ನು ತೆಗೆದುಕೊಂಡು ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ.
ಪತ್ರ ನೀಡಿದ ಬಳಿಕವು ಸುಮ್ಮನಾಗದ ವ್ಯಕ್ತಿ, ಮತ್ತೆ ಮತ್ತೆ ವೇದಿಕೆಯ ಬಳಿ ತೆರಳಿ ಸಚಿವರುಗಳಿಗೆ ಕೈಮುಗಿಯಲು ಮುಂದಾಗಿದ್ದಾನೆ. ಕುಡುಕ ಮಹಾಶಯನ ವರ್ತನೆಗೆ ಬೇಸತ್ತ ಪೊಲೀಸರು, ಇತನನ್ನು ಹೊರಗೆಳೆದು ತಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಚನ್ನಾಗಿರಬೇಕು ಎಂದು ಆಶಿಸುತ್ತೇನೆ. ಇವರಿಗೆ ದೇವರು ಆರೋಗ್ಯ ಆಯುಷ್ಯ ಕಲ್ಪಿಸಲಿ. ಮುಖ್ಯಮಂತ್ರಿಯವರು ನೂರು ವರ್ಷಗಳ ಕಾಲ ಚನ್ನಾಗಿರಬೇಕೆಂದು ಬೇಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಅವರನ್ನು ಹಾಡಿ ಹೊಗಳಿ ಪತ್ರ ಬರೆದಿದ್ದ ಎಂದು ಮುಖಂಡರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


