ಬಾಡಿಗೆ ಪಾವತಿಸದ ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿಯಿಂದ ಬೀಗ
ಬಾಡಿಗೆ ಕೊಡದ ಹಲವು ಸರ್ಕಾರಿ ಕಟ್ಟಡಗಳಿಗೆ ಇಂದು ಬೆಳ್ಳಂ ಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ....

ಬೆಂಗಳೂರು: ಬಾಡಿಗೆ ಕೊಡದ ಹಲವು ಸರ್ಕಾರಿ ಕಟ್ಟಡಗಳಿಗೆ ಇಂದು ಬೆಳ್ಳಂ ಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಹಲವು ವರ್ಷಗಳಿಂದ ಪಶ್ಚಿಮ ಮತ್ತು ದಕ್ಷಿಣ ವಲಯದ ಸರ್ಕಾರಿ ಕಚೇರಿಗಳು ಸುಮಾರು 6.ಕೋಟಿ ರು. ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದವು. ಜಯನಗರ 4ನೇ ಬ್ಲಾಕ್ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡವೊಂದರಿಂದಲೇ ಸುಮಾರು 4.51 ಕೋಟಿ ರು ಬಾಡಿಗೆ ಹಣ ಬರಬೇಕಾಗಿದೆ. ಅದರಲ್ಲಿ 11 ಸರ್ಕಾರಿ ಸ್ವಾಮ್ಯದ ಅಂಗಡಿಗಳಿವೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿ ಲೀಲಾವತಿ ಹೇಳಿದ್ದಾರೆ.
ಕಳೆದ 2007 ರಿಂದ ಇದುವರೆಗೂ ಒಂದು ನಯಾಪೈಸೆ ಬಾಡಿಗೆ ಹಣ ಪಾವತಿಸಿಲ್ಲ,. ಹಲವು ಬಾರಿ ನೋಟಿಸ್ ನೀಡಿದ್ದರೂ ಹಣ ಪಾವತಿ ಮಾಡಿಲ್ಲ. ಸಣ್ಣ ನೀರಾವರಿ ಕಚೇರಿ ಸಿಬ್ಬಂದಿ ಹಣ ಪಾವತಿಸುವುದಾಗಿ ಲಿಖಿತವಾಗಿ ಬರೆದು ಕೊಟ್ಟಿರುವುದರಿಂದ ಅದೊಂದದು ಕಟ್ಟಡ ಬಿಟ್ಟು ಉಳಿದ ಎಲ್ಲ ಕಚೇರಿಗಳಿಗೂ ಬೀಗ ಜಡಿದಿರುವುದಾಗಿ ಅವರು ತಿಳಿಸಿದ್ದಾರೆ.
ಪಶ್ಚಿಮ ವಲಯದ ಯಶವಂತಪುರ ಕಾಂಪ್ಲೆಕ್ಸ್ ನಲ್ಲಿರುವ ಆರ್ ಟಿಓ ಕಚೇರಿ, ತೂಕ ಮತ್ತು ಮಾಪನ ಇಲಾಖೆ ಸೇರಿಹಲವು ಭಾಗಗಳಲ್ಲಿಬಾಡಿಗೆ ಪಾವತಿಸದ ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಕಳೆದ ಎರಡು ವರ್ಷಗಳಿಂದ ಸುಮಾರು 1 ಕೋಟಿ ರು. ಹಣ ಪಾವತಿಸಬೇಕಿದೆ ಎಂದು ಹೇಳಿದ್ದಾರೆ.
ಸುಮಾರು 25 ಸದಸ್ಯರಿಂದ ಬಿಬಿಎಂಪಿ ಅಧಿಕಾರಿಗಳ ತಂಡ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿತು. ಉಪ್ಪಾರ ಪೇಟೆ ಪೊಲೀಸ್ ಠಾಣೆಯ ಸುಭಾಷ್ ನಗರದಲ್ಲಿದ್ದ ಲಿಡ್ಕರ್, ಬಿಎಸ್ ಎನ್ ಎಲ್, ಕಾವೇರಿ ಹ್ಯಾಂಡಿಕ್ರಾಪ್ಟ್ ಮತ್ತು ಪ್ರಿಯದರ್ಶಿನಿ ಕಚೇರಿಗಳಿಂದ ಸುಮಾರು 40 ಲಕ್ಷ ಹಣ ಬಾಕಿ ನೀಡದ ಹಿನ್ನೆಲೆಯಲ್ಲಿ ಈ ಎಲ್ಲಾ ಕಚೇರಿಗಳಿಗೆ ಬೀಗ ಹಾಕಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


