ದೇಶದ ಕಡಿಮೆ ಮಾಲಿನ್ಯ ನಗರಗಳಲ್ಲಿ ಹಾಸನಕ್ಕೆ 3ನೇ ಸ್ಥಾನ
ಅತ್ಯಂತ ಕಡಿಮೆ ಮಾಲಿನ್ಯ ಪ್ರಮಾಣ ಹೊಂದಿರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಹಾಸನ 3ನೇ ಸ್ಥಾನ ಪಡೆದುಕೊಂಡಿದೆ...

ಹಾಸನ: ಅತ್ಯಂತ ಕಡಿಮೆ ಮಾಲಿನ್ಯ ಪ್ರಮಾಣ ಹೊಂದಿರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಹಾಸನ 3ನೇ ಸ್ಥಾನ ಪಡೆದುಕೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಜಿನಿವಾದಲ್ಲಿ ಪಟ್ಟಿ ಬಿಡುಗಡೆ ಮಾಡಿದೆ. ಡಬ್ಲುಎಚ್ಒ ವಿಶ್ವದ ಒಟ್ಟು 122 ನಗರಗಳನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿತ್ತು. ಗಾಳಿಯಲ್ಲಿರುವ ಧೂಳಿನ ಕಣಗಳ ಪ್ರಮಾಣ ಆಧರಿಸಿ ಅಧ್ಯಯನ ನಡೆಸಲಾಗಿತ್ತು.
ಈ ಪಟ್ಟಿಯಲ್ಲಿ ಕೇರಳದ ಕೊಲ್ಲಂ, ಪಾತರಂತಿಟ್ಟ ನಗರಗಳೊಂದಿಗೆ ಹಾಸನ ನಗರ ಅತ್ಯಂತ ಕಡಿಮೆ ಧೂಳಿನ ನಗರದ ಪಟ್ಟ ಉಳಿಸಿಕೊಂಡಿದೆ. ಅಧ್ಯಯನ ಪ್ರಕಾರ ಹಾಸನ ನಗರ ಪ್ರತಿ ಕ್ಯೂಬಿಕ್ ಮೀಟರ್ ಗಾಳಿಯಲ್ಲಿ ಕೇವಲ 36 ಮೈಕ್ರೋ ಗ್ರಾಂ ಧೂಳಿನ ಕಣಗಳನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


