ರಾಜ್ಯ

ಹಕ್ಕಿ ಜ್ವರ: ಎಚ್ಚೆತ್ತುಕೊಂಡ ಬೆಂಗಳೂರಿಗರು

ಕರ್ನಾಟಕದ ಬೀದರ್ ನಲ್ಲಿ ಅಪಾಯಕಾರಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಂಗಳೂರಿನ ನಿವಾಸಿಗಳು...

ಹಕ್ಕಿ ಜ್ವರ: ಎಚ್ಚೆತ್ತುಕೊಂಡ ಬೆಂಗಳೂರಿಗರು
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕರ್ನಾಟಕದ ಬೀದರ್ ನಲ್ಲಿ ಅಪಾಯಕಾರಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಂಗಳೂರಿನ ನಿವಾಸಿಗಳು ಎಚ್ಚೆತ್ತುಕೊಂಡಿದ್ದು, ಚಿಕನ್ ಆಹಾರ ಸೇವನೆ ಕಡಿತಗೊಳಿಸುತ್ತಿದ್ದಾರೆ. 
ಅಷ್ಟೇ ಅಲ್ಲದೇ, ಹಕ್ಕಿ ಜ್ವರ ಸುದ್ದಿ ಹರಡುತ್ತಿದ್ದಂತೆ ಚಿಕನ್ ಮಾರಾಟವೂ ಕುಸಿತ ಕಂಡಿದೆ. ಮಾದ್ಯಮಗಳಿಂದ ಹಕ್ಕಿ ಜ್ವರ ಹರಡುತ್ತಿರುವ ಬಗ್ಗೆ ತಿಳಿಯಿತು. ಹಾಗಾಗಿ, ಮಾಂಸಹಾರವನ್ನು ನಾನು ತ್ಯಜಿಸಿದ್ದೇನೆ ಎಂದು ಇಂಜಿನಿಯರ್ ಶ್ರೀ ಹರ್ಷಾ ಹೇಳಿದ್ದಾರೆ. 
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಇನ್ ಫಿನಿಷಿಯಾ ಕೆಫೆ ಮ್ಯಾನೇಜರ್ ವಾಸುದೇವ್ ರಾವ್ ಮಾತನಾಡಿ, ಕೋಳಿ ಮಾಂಸವನ್ನು ಬಳಸುವ ಮೊದಲು ಅದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲವಾದಲ್ಲಿ ಮಾತ್ರ ಆ ಕೋಳಿ ಮಾಂಸವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ಹಕ್ಕಿ ಜ್ವರ ಭೀತಿ ಹಿನ್ನೆಲೆ ಮಾತನಾಡಿದ ಕರ್ನಾಟಕ ಪೌಲ್ಟ್ರಿ ರೈತರು ಮತ್ತು ಬ್ರೀಡರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೆಚ್ ಎನ್ ನಾಗಭೂಷಣ್ ಅವರು ಬೀದರ್ ನ ಕೋಳಿ ಫಾರಂ ಒಂದರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಅವುಗಳ ನಾಶಕ್ಕೆ ಕ್ರಮಕೈಗೊಳ್ಳಲಾಗಿದೆ. ಜನರು ಭಯ ಪಡುವ ಅಗತ್ವವಿಲ್ಲ. ಇನ್ನು ರೋಗ ಹರಡದಂತೆ ಕ್ರಮಕೈಗೊಳ್ಳಲಾಗಿದೆ. ಇನ್ನು ಕೋಳಿ ಮಾಂಸ ಸೇವಿಸುವವರು ಪದಾರ್ಥವನ್ನು 120 ಡ್ರಿಗಿ ಸೆಲ್ಷಿಯನ್ ನಲ್ಲಿ ಬೇಯಿಸಿ ಎಂದು ಸಲಹೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.