ರಾಜ್ಯ

ಬೆಂಗಳೂರಿನಲ್ಲಿ ಇಂದು ಕೂಡ ಅಧಿಕ ಮಳೆ ಸಾಧ್ಯತೆ: ಹವಮಾನ ಇಲಾಖೆ

ಬಿರು ಬಿಸಿಲ ಬೇಗೆಗೆ ತತ್ತರಿಸಿದ್ದ ಸಿಲಿಕಾನ್ ಸಿಟಿ ಕಳೆದ ಮೂರು ದಿನಗಳಿಂದ ವರುಣನ ಕರುಣೆಯಿಂದ ತಂಪಾಗಿದೆ....

ಬೆಂಗಳೂರಿನಲ್ಲಿ ಇಂದು ಕೂಡ ಅಧಿಕ ಮಳೆ ಸಾಧ್ಯತೆ: ಹವಮಾನ ಇಲಾಖೆ
ಸಿಟಿ ರೈಲ್ವೆ ಸ್ಟೇಷನ್ ಬಳಿ ಮಳೆಯಿಂದ ಧರೆಗುರುಳಿದ ಬೃಹತ್ ಮರ
Published On :

ಬೆಂಗಳೂರು: ಬಿರು ಬಿಸಿಲ ಬೇಗೆಗೆ ತತ್ತರಿಸಿದ್ದ ಸಿಲಿಕಾನ್ ಸಿಟಿ ಕಳೆದ ಮೂರು ದಿನಗಳಿಂದ ವರುಣನ ಕರುಣೆಯಿಂದ ತಂಪಾಗಿದೆ.

ನಿನ್ನೆ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿರುವ ವರದಿಯಾಗಿದ್ದು, ರಾಜ್ಯ ರಾಜಧಾನಿಯಲ್ಲಿ ಇಂದು ಕೂಡ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಬೆಂಗಳೂರು ಹೊರ ವಲಯ ಆನೇಕಲ್ ನ ಯೆಮಾಲೆಯಲ್ಲಿ ದಾಖಲೆಯ 67.5 ಮಿಮಿ ಮಳೆಯಾಗಿದೆ, ಸರ್ಜಾಪುರದಲ್ಲಿ 47.5 ಬೆಂಗಳೂರು ದಕ್ಷಿಣ ತರಲೂರಿನಲ್ಲಿ 47. ಮಿಮಿ, ವರ್ತೂರಿನಲ್ಲಿ 43.5 ಮಿಮಿ ಮಳೆಯಾಗಿರುವ ವರದಿಯಾಗಿದೆ.

ಇದೇ ವೇಳೆ ನಗರದಲ್ಲಿ ಮಳೆಯಿಂದಾಗಿ ಹಲವು ಮರಗಳು ಧರೆಗುಳಿದಿವೆ.  ನಗರ ರೈಲ್ವೆ ನಿಲ್ದಾಣ, ಕೋರಮಂಗಲ 1ನೇ ಬ್ಲಾಕ್ ನಲ್ಲಿ ಮರಗಳು ಉರುಳಿ ಬಿದ್ದಿದ್ದವು. ಇನ್ನು ಹಲವೆಡೆ ಮರಗಳು ಬೃಹತ್ ಕೊಂಬೆಗಳು ಮುರಿದು ಬಿದ್ದು ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ಬಿಬಿಎಂಪಿ ತಿಳಿಸಿದೆ.

ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ,  ಕೋಲಾರ ಸಮೀಪದ ಮಾಲೂರಿನಲ್ಲಿ 70.5 ಮಿಮಿ ದಾಖಲೆಯ ಮಳೆಯಾಗಿದ್ದು. ಬರ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಎಲ್ಲಿಯೂ ಮಳೆಯ ವರದಿಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.