ರಾಜ್ಯ

ಮೆಟ್ರೋದಲ್ಲಿ ಜನರ ಓಡಾಟ ಹೆಚ್ಚಾದರೆ ಹೆಚ್ಚುವರಿ 3 ಬೋಗಿಗಳ ಅಳವಡಿಕೆ

ಕಳೆದ ಏಪ್ರಿಲ್ 28ರಂದು ಲೋಕಾರ್ಪಣೆಗೊಂಡಿದ್ದ ನಮ್ಮ ಮೆಟ್ರೋ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕರ ಓಡಾಟ ಹೆಚ್ಚಾಗಿದ್ದು, ಜನ ದಟ್ಟನೆ ಇನ್ನು ಹೆಚ್ಚಾದರೆ...

ಮೆಟ್ರೋದಲ್ಲಿ ಜನರ ಓಡಾಟ ಹೆಚ್ಚಾದರೆ ಹೆಚ್ಚುವರಿ 3 ಬೋಗಿಗಳ ಅಳವಡಿಕೆ
ನಮ್ಮ ಮೆಟ್ರೋ
Published On :

ಬೆಂಗಳೂರು: ಕಳೆದ ಏಪ್ರಿಲ್ 28ರಂದು ಲೋಕಾರ್ಪಣೆಗೊಂಡಿದ್ದ ನಮ್ಮ ಮೆಟ್ರೋ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕರ ಓಡಾಟ ಹೆಚ್ಚಾಗಿದ್ದು, ಜನ ದಟ್ಟನೆ ಇನ್ನು ಹೆಚ್ಚಾದರೆ ಮಟ್ರೋಗೆ ಹೆಚ್ಚುವರಿ ಮೂರು ಬೋಗಿಗಳನ್ನು ಅಳವಡಿಸಲಾಗುವುದು ಎಂದು ಬಿಎಂಆರ್ಸಿಎಲ್ ನಿರ್ದೇಶಕ ಎನ್ಎಂ ಧೋಕೆ ಹೇಳಿದ್ದಾರೆ.

ನಗರದ ಎಂ.ಜಿ. ರಸ್ತೆ ಬುಲೇವಾರ್ಡ್‌ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್‌ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸಿದ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ಅನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಧೋಕೆ ಅವರು, ನಗರದಲ್ಲಿ ಮೆಟ್ರೋ ರೈಲಿಗೆ ಅತ್ಯುತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.

ನಿತ್ಯ ಒಟ್ಟಾರೆ 33 ಕಿ.ಮೀ. ಮೆಟ್ರೋ ಮಾರ್ಗದಲ್ಲಿ ಒಂದೂವರೆ ಲಕ್ಷ ಜನ ಸಂಚರಿಸುತ್ತಿದ್ದಾರೆ. ನಮ್ಮ ನಿರೀಕ್ಷೆ ಎರಡು ಲಕ್ಷ ಪ್ರಯಾಣಿಕರು. ಮುಂಬರುವ ದಿನಗಳಲ್ಲಿ ನಿರೀಕ್ಷೆ ಮೀರಿ ಜನ ಮೆಟ್ರೋದಲ್ಲಿ ಸಂಚರಿಸಿದರೆ. ಪ್ರಸ್ತುತ 10 ನಿಮಿಷಕ್ಕೊಂದು ಓಡುತ್ತಿರುವ ಮೆಟ್ರೋ ರೈಲನ್ನು ಪ್ರಯಾಣಿಕರ ಅನುಕೂಲಕ್ಕೆ ಅನುಗುಣವಾಗಿ ಕನಿಷ್ಠ 3 ನಿಮಿಷಗಳ ಅಂತರದಲ್ಲೂ ರೈಲುಗಳ ಸೇವೆ ಒದಗಿಸುವ ಸಾಮರ್ಥ್ಯ ಬಿಎಂಆರ್‌ಸಿಗೆ ಇದೆ ಎಂದರು.

ಮೆಜೆಸ್ಟಿಕ್ ಇಂಟರ್ ಚೇಂಜ್ ನಿಲ್ದಾಣದಲ್ಲಿ ಟನಲ್ ಕೊರೆದು ಎರಡು ವರ್ಷಗಳಾದರೂ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಗೊಂಡಿರಲಿಲ್ಲ. ಈ ಅವಧಿಯಲ್ಲಿ ಸತತ ಮೂರು ಬಾರಿ ಕಾಮಗಾರಿ ಸಂಬಂಧ ಟೆಂಡರ್ ಕರೆಯಲಾಗಿತ್ತು. ಆದರೆ ಎರಡು ವರ್ಷಗಳ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. 2012ರಲ್ಲಿ ಆರಂಭಗೊಂಡ ನಿರ್ಮಾಣ ಕಾರ್ಯ ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿತು ಎಂದು ಬಿಎಂಆರ್ಸಿಎಲ್ ಪ್ರಧಾನ ಇಂಜಿನಿಯರ್ ಹೆಗ್ಗಾರೆಡ್ಡಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.