ಕರ್ನಾಟಕೇತರರಿಗೆ ಬಿಡಿಎ ಸಿಹಿ ಸುದ್ದಿ; ನಿವೇಶನ ಹಂಚಿಕೆ ನಿಯಮ ಸಡಿಲ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಲ್ಲಿ ನಿವೇಶನದ ಕನಸು ಕಾಣುತ್ತಿರುವ ಕರ್ನಾಟಕತೇರರಿಗೆ ಸಿಹಿಸುದ್ದಿಯೊಂದಿದ್ದು, ಬಿಡಿಎ ತನ್ನ ನಿಯಮಾವಳಿಗಳನ್ನು ಇದೀಗ ಸಡಿಲಗೊಳಿಸಿದೆ..

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಲ್ಲಿ ನಿವೇಶನದ ಕನಸು ಕಾಣುತ್ತಿರುವ ಕರ್ನಾಟಕತೇರರಿಗೆ ಸಿಹಿಸುದ್ದಿಯೊಂದಿದ್ದು, ಬಿಡಿಎ ತನ್ನ ನಿಯಮಾವಳಿಗಳನ್ನು ಇದೀಗ ಸಡಿಲಗೊಳಿಸಿದೆ.
ಬಿಡಿಎ ನಿರ್ಮಿತ ನಿವೇಶನಗಳನ್ನು ಮಾರುವ ನಿಟ್ಟಿನಲ್ಲಿ ಮತ್ತು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬಿಡಿಎ ತನ್ನ ನಿಯಮಾವಳಿಯಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡಿದ್ದು, ಈ ಹಿಂದೆ ಇದ್ದ ಕರ್ನಾಟಕೇತರ ಅರ್ಜಿದಾರರು ಕಡ್ಡಾಯವಾಗಿ 15 ವರ್ಷ ಕರ್ನಾಟಕದ ನಿವಾಸಿಗಳಾಗಿರಬೇಕು ಎಂಬ ನಿಯಮವನ್ನು ಸಡಿಲಗೊಳಿಸಿದ್ದಾರೆ. 15 ವರ್ಷಗಳ ಬದಲಿಗೆ ಇದೀಗ 5 ವರ್ಷ ಅರ್ಜಿದಾರರು ಕರ್ನಾಟಕದಲ್ಲಿದ್ದರೆ ಸಾಕು ಅವರು ನಿವೇಶನ ಪಡೆಯಲು ಅರ್ಹರು ಎಂದು ಬಿಡಿಎ ತಿಳಿಸಿದೆ. ಕರ್ನಾಟಕದಲ್ಲಿ ಐದು ವರ್ಷದಿಂದ ವಾಸಿಸುತ್ತಿರುವ ಕುರಿತು ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕು ಎಂದು ಬಿಡಿಎ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಬಿಡಿಎ ಹಿರಯ ಅಧಿಕಾರಿಯೊಬ್ಬರು, ಕರ್ನಾಟಕೇತರರು ನಿವೇಶನ ಕೊಳ್ಳಲು ಇರುವ ನಿಯಮಾವಳಿಯನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದ್ದು, 15 ರ ಬದಲಾಗಿ 5 ವರ್ಷಕ್ಕೆ ಅವಧಿಯನ್ನು ಇಳಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮತ್ತೋರ್ವ ಬಿಡಿಎ ಹಿರಿಯ ಅಧಿಕಾರಿಯ ಪ್ರಕಾರ ನಿವೇಶನಕ್ಕಾಗಿ ಈ ಬಾರಿ 777 ಕರ್ನಾಟಕೇತರ ಅರ್ಜಿಗಳು ಬಂದಿವೆ ಎಂದು ಹೇಳಿದ್ದಾರೆ. ದೊಡ್ಡಬನಹಳ್ಳಿ, ಆಲೂರು, ಕಣ್ಮಿಣಿಕೆ, ವಲಗೇರಹಳ್ಳಿ, ಮಲಗಾಲ ಮತ್ತು ಕೊಮ್ಮಘಟದಲ್ಲಿ ಬಿಡಿಎ ನಿರ್ಮಿಸಿರುವ 3280 ಫ್ಲಾಟ್ ಗಳಿಗಾಗಿ ಒಟ್ಟು 777 ಅರ್ಜಿಗಳು ಮಾತ್ರ ಬಂದಿವೆ ಎಂದು ಹೇಳಿದ್ದಾರೆ. ಈ ಫ್ಲ್ಯಾಟ್ ಗಳ ಮಾರಾಟಕ್ಕೆ ಈ ಹಿಂದೆಯೂ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಅರ್ಜಿದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


