ಪೈಪ್ ಲೈನ್ ಒಡೆದು ವ್ಯರ್ಥವಾಯ್ತು 19 ಲಕ್ಷ ಲೀಟರ್ ಅಮೂಲ್ಯವಾದ ನೀರು
ಪೈಪ್ ಲೈನ್ ಒಡೆದು ಸುಮಾರು 19 ಲಕ್ಷ ಲೀಟರ್ ಅಮೂಲ್ಯವಾದ ನೀರು ವ್ಯರ್ಥವಾಗಿರುವ ಘಟನೆ ಬೆಳಗಾವಿಯ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ....

ಬೆಳಗಾವಿ: ಬರದಿಂದ ತತ್ತರಿಸಿರುವ ರಾಜ್ಯದ ಜನತೆ ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಪೈಪ್ ಲೈನ್ ಒಡೆದು ಸುಮಾರು 19 ಲಕ್ಷ ಲೀಟರ್ ಅಮೂಲ್ಯವಾದ ನೀರು ವ್ಯರ್ಥವಾಗಿರುವ ಘಟನೆ ಬೆಳಗಾವಿಯ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ.
ಮುಚ್ಚಂಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹಿಡಕಲ್ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಒಡೆದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೂರಾರು ಅಡಿ ಎತ್ತರಕ್ಕೆ ನೀರು ಚಿಮ್ಮಿದ ರಭಸಕ್ಕೆ 4 ಮನೆ ಸಂಪೂರ್ಣ ಜಲಾವೃತಗೊಂಡಿವೆ.
ಮಂಗಳವಾರ ರಾತ್ರಿ 2 ಗಂಟೆಯ ಸುಮಾರಿಗೆ ಪೈಪ್ಲೈನ್ ಒಡೆದು ದೇವಪ್ಪ ಜಾಧವ, ವಿನೋದ ಕುಳಚಗೌಡ, ನಾರಾಯಣ ಜಕ್ಕಾಣಿ ಹಾಗೂ ಬಸವಂತ ಬಂಗಾರೆ ಅವರ ಮನೆಗೆ ನೀರು ನುಗ್ಗಿದೆ. ನಾಲ್ಕು ಮನೆಗಳು ಜಲಾವೃತಗೊಂಡಿವೆ. ಮೇಲ್ಛಾವಣಿ, ಗೋಡೆಗಳೆಲ್ಲ ಕುಸಿದು ಬಿದ್ದಿವೆ.
ಮಳೆ ಬರುತ್ತಿರಬರಹುದು ಎಂದು ಭಾವಸಿದ ಅವರಿಗೆ ಹೊರಗಡೆ ಬಂದು ನೋಡುವಷ್ಟರಲ್ಲಿ ಪರಿಸ್ಥಿತಿಯ ಅರಿವಾಗಿದೆ. ಕೂಡಲೇ ಮನೆಯಲ್ಲಿ ಕಟ್ಟಿದ್ದ ಜಾನುವಾರಗಳನ್ನು ದೂರಕ್ಕೆ ಎಳೆದೊಯ್ದಿದ್ದಾರೆ. ಇನ್ನು ಈ ಕುಟುಂಬದವರು ಬೆಳೆದಿದ್ದ ಜೋಳ, ಸೌತೇಕಾಯಿ, ಹೂಕೋಸು, ಎಲೆಕೋಸು ಮುಂತಾದ ಬೆಳೆಗಳೆಲ್ಲಾ ಹಾನಿಯಾಗಿವೆ.
ಮನೆಯೊಳಗಿದ್ದ ಟಿವಿ, ಫ್ರಿಡ್ಜ್, ಫರ್ನೀಚರ್, ಪಾತ್ರೆ, ಸಾಮಾನು ಸರಂಜಾಮು ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿವೆ, ಜಲಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
1998ರಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ಹಿಡಕಲ್ ಜಲಾಶಯದಿಂದ ಲಕ್ಷ್ಮೀಟೇಕ್ ಪಂಪ್ಹೌಸ್ವರೆಗೆ 1,168 ಮಿ.ಮೀ. ವ್ಯಾಸದ ಪೈಪ್ಲೈನ್ ಅಳವಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


