ರಾಜ್ಯ

ಉಲ್ಲಾಳ ಹಿಂಸಾಚಾರ: ಮೂವರ ಬಂಧನ, ನಿಷೇಧಾಜ್ಞೆ ಮುಂದುವರಿಕೆ

ಉಲ್ಲಾಳದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಉಲ್ಲಾಳ ಹಿಂಸಾಚಾರ: ಮೂವರ ಬಂಧನ, ನಿಷೇಧಾಜ್ಞೆ ಮುಂದುವರಿಕೆ
ಸಾಂದರ್ಭಿಕ ಚಿತ್ರ
Published On :

ಮಂಗಳೂರು: ಉಲ್ಲಾಳದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಉಲ್ಲಾಳದ ಮೊಗವೀರಪಟ್ಟಣದ ರಾಹುಲ್ ಪೂಜಾರಿ, ಎಲ್ಯಾರ್ ಪಡವು ನಿವಾಸಿ ಪ್ರಜ್ವಲ್ ಅಲಿಯಾಸ್ ಹೇಮಚಂದ್ರ ಹಾಗೂ ತೋಕ್ಕೊಟುವಿನ ಕಪಿಕಡ್ ಗ್ರಾಮದ ವಿನೀತ್ ಬಂಧಿತ ಆರೋಪಿಗಳು. ಏಪ್ರಿಲ್ 26 ರಂದು ಈ ಮೂವರು ಆರೋಪಿಗಳು ಸಫ್ವಾನ್ ಹಸನ್ ಮತ್ತು ಸಲೀಮ್ ಮತ್ತು ನಿಜಾಮ್ ಎಂಬುವರ ಮೇಲೆ ದಾಳಿ ನಡೆಸಿದ್ದರು.

ಸಲೀಂ ಮತ್ತು ನಿಜಾಂ ದಾಳಿಯಿಂದ ಪಾರಾಗಿದ್ದರು. ಆದರೆ ಸಫ್ವಾನ್ ತೀವ್ರ ಗಾಯಗಳಿಂದ ಆಸ್ಪತ್ರೆ ಸೇರಿ ಏಪ್ರಿಲ್ 28 ರಂದು ಸಾವನ್ನಪ್ಪಿದ್ದನು. ರಾಹುಲ್ ಪೂಜಾರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಉಲ್ಲಾಳದಲ್ಲಿ ನಿಷೇದಾಜ್ಞೆ ಮುಂದುವರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.