ರಾಜ್ಯದಲ್ಲಿ 3 .82 ಲಕ್ಷ ಜನರಿಗೆ ಹೆಚ್ಐವಿ: ಆರೋಗ್ಯ ಸಚಿವ ಖಾದರ್
ರಾಜ್ಯದಲ್ಲಿ 3 .82 ಲಕ್ಷ ಜನ ಹೆಚ್ಐವಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಯು ಟಿ ಖಾದರ್ ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.

Published On :
ಬೆಂಗಳೂರು: ರಾಜ್ಯದಲ್ಲಿ 3 .82 ಲಕ್ಷ ಜನ ಹೆಚ್ಐವಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಯು ಟಿ ಖಾದರ್ ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.
ಶಾಸಕ ನಾರಾಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಯು ಟಿ ಖಾದರ್, 3 .82 ಲಕ್ಷ ಜನರಿಗೆ ಹೆಚ್ಐವಿ ಇದ್ದು, 2 .83 ಲಕ್ಷ ಜನರು ಆಂಟಿರೆಟ್ರೋವೈರಲ್ ತೆರಪಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಕೇವಲ 1 .27 ಲಕ್ಷ ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು 63,635 ಮಹೆಳೆಯರು ಹಾಗೂ 55,181 ಪುರುಷರು, 8,117 ಮಕ್ಕಳು, 223 ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ ಎಂದು ಯುಟಿ ಖಾದರ್ ಸದನಕ್ಕೆ ಮಾಹಿತಿ ನೀಡಿದ್ದಾರೆ.
33 ,000 ಹೆಚ್ಐವಿ ಪೀಡಿತರು ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳಾಗಿದ್ದಾರೆ, 12 ,805 ಮಕ್ಕಳು ಪ್ರತಿ ತಿಂಗಳು 650 ರಿಂದ 750 ರೂ ಮಾಸಾಶನ ಪಡೆಯುತ್ತಿದ್ದಾರೆ, 611 ಮಕ್ಕಳನ್ನು ಆರ್ ಟಿ ಇ ಅಡಿಯಲ್ಲಿ ಶಾಲೆಗೆ ಸೇರಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


