ರಾಜ್ಯ

ಮೌಲ್ಯ ಕಳೆದುಕೊಳ್ಳುತ್ತಿರುವ ಗೌರವ ಡಾಕ್ಟರೇಟ್ ಪದವಿ: ರಾಜ್ಯಪಾಲರ ಅಸಮಾಧಾನ

ವಿಶ್ವವಿದ್ಯಾಲಯಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಗಳು ತನ್ನ ಮೌಲ್ಯ ಕಳೆದುಕೊಳ್ಳುತ್ತಿವೆ. ಸಿಕ್ಕಸಿಕ್ಕವರಿಗೆ ಬೇಕಾಬಿಟ್ಟಿಯಾಗಿ...

ಮೌಲ್ಯ ಕಳೆದುಕೊಳ್ಳುತ್ತಿರುವ ಗೌರವ ಡಾಕ್ಟರೇಟ್ ಪದವಿ: ರಾಜ್ಯಪಾಲರ ಅಸಮಾಧಾನ
ರಾಜ್ಯಪಾಲ ವಜುಬಾಯ್ ರೂಢಾಬಾಯ್ ವಾಲಾ
Published On :

ಬೆಂಗಳೂರು: ವಿಶ್ವವಿದ್ಯಾಲಯಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಗಳು ತನ್ನ ಮೌಲ್ಯ ಕಳೆದುಕೊಳ್ಳುತ್ತಿವೆ. ಸಿಕ್ಕಸಿಕ್ಕವರಿಗೆ ಬೇಕಾಬಿಟ್ಟಿಯಾಗಿ ಪದವಿ ಪ್ರದಾನ ಮಾಡಲಾಗುತ್ತಿವೆ.  ಎಂದು ರಾಜ್ಯಪಾಲ ವಜೂಭಾಯಿ ರೂಢಾಬಾಯಿ ವಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಣ, ಜಾತಿ, ರಾಜಕೀಯ, ಪ್ರಭಾವಗಳಿಂದ ಲಾಬಿ ನಡೆಸಿ ಗೌರವ ಡಾಕ್ಟರೇಟ್ ಪಡೆದುಕೊಳ್ಳುತ್ತಾರೆ. ಇದಕ್ಕೆ ವಿಶ್ವವಿದ್ಯಾಲಯವೂ ಕಾರಣವಾಗುತ್ತದೆ ಎಂದರು.
  ವಿಶ್ವ ವಿದ್ಯಾಲಯಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡುವಾಗ ಯಾವ ಮಾನದಂಡ ಅನುಸರಿಸುತ್ತೀರಿ? ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಡಾಕ್ಟರೇಟ್ ಪ್ರದಾನ ಮಾಡಿದ್ದೀರಿ. ಅವರ ಸೇವೆಯಿಂದ ಸಮಾಜಕ್ಕೆ ಏನು ಉಪಯೋಗ, ಯಾವ ಆಧಾರದಲ್ಲಿ ನೀವು ಅವರಿಗೆ ಡಾಕ್ಟರೇಟ್ ನೀಡಿದ್ದೀರಿ ಎಂದು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ಅವರು ಒಬ್ಬ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡಲು 8 ಅಂಶಗಳ ಮಾನದಂಡವನ್ನು ಸೂಚಿಸಿದ್ದಾರೆ. ಅವುಗಳೆಂದರೆ ವಿವಿ ಸಿಂಡಿಕೇಟ್ ನಿಂದ ಹೆಸರುಗಳ ಶಿಫಾರಸು ಆಗಬೇಕು, ರಾಜ್ಯಪಾಲರಿಂದಲೇ ನೂತನ ಪರಿಶೀಲನಾ ಸಮಿತಿ ರಚಿಸಬೇಕು. ಡಾಕ್ಟರೇಟ್ ಪಟ್ಟಿ ಅಂತಿಮಗೊಳಿಸಲು ಪರಿಶೀಲನಾ ಸಮಿತಿ ನೇಮಕ ಮಾಡಬೇಕು. ಮೂರಕ್ಕಿಂತ ಹೆಚ್ಚು ಸಲ ಗಣ್ಯರ ಶಿಫಾರಸ್ಸು ಮಾಡಬಾರದು ಹಾಗೂ ಘಟಿಕೋತ್ಸವಕ್ಕೆ 45 ದಿನ ಬಾಕಿ ಇರುವಾಗಲೇ ಪಟ್ಟಿ ಅಂತಿಮಗೊಳಿಸಿಯಾಗಬೇಕೆಂಬುದೇ ರಾಜ್ಯಪಾಲರ ನಿಯಮವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.