ರಾಜ್ಯ

ಚಿಕ್ಕಮಗಳೂರಿನಲ್ಲಿ ಒಂಟಿ ಸಲಗದ ದಾಳಿಗೆ ವ್ಯಕ್ತಿ ಬಲಿ

ಚಿಕ್ಕಮಗಳೂರಿನಲ್ಲಿ ದಾಳಿ ಮಾಡಿದ ಒಂಟಿ ಸಲಗವೊಂದು ವ್ಯಕ್ತಿಯೊಬ್ಬರನ್ನು ಕೊಂದು ಹಾಕಿದ್ದು, ಹಲವು ವಾಹನಗಳಿಗೆ ಹಾನಿ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ...

ಚಿಕ್ಕಮಗಳೂರಿನಲ್ಲಿ ಒಂಟಿ ಸಲಗದ ದಾಳಿಗೆ ವ್ಯಕ್ತಿ ಬಲಿ
ಒಂಟಿ ಸಲಗ ದಾಳಿ (ಸಂಗ್ರಹ ಚಿತ್ರ)
Published On :

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ದಾಳಿ ಮಾಡಿದ ಒಂಟಿ ಸಲಗವೊಂದು ವ್ಯಕ್ತಿಯೊಬ್ಬರನ್ನು ಕೊಂದು ಹಾಕಿದ್ದು, ಹಲವು ವಾಹನಗಳಿಗೆ ಹಾನಿ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ  ನಡೆದಿದೆ.

ಭಾನುವಾರ ಮುಂಜಾನೆ ಚಿಕ್ಕಮಗಳೂರಿನ ಬಣಕಲ್ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ಆಗ ತಾನೆ ಬಹಿರ್ದೆಸೆಗೆ ಹೋಗಿ ಮನೆಗೆ ವಾಪಸಾಗುತ್ತಿದ್ದ 50 ವರ್ಷದ ಶೀನ ಎಂಬಾತನನ್ನು ನೆಲಕ್ಕೆ  ಅಪ್ಪಳಿಸಿ ಕೊಂದುಹಾಕಿದೆ. ಅಲ್ಲದೆ ಅದೇ ಸುತ್ತಮುತ್ತಲ ಪ್ರದೇಶದಲ್ಲಿದ್ದ 4 ಆಟೊ, 1 ಕಾರು ಹಾಗೂ ನಾಲ್ಕೈದು ಮನೆಗಳ ಹೆಂಚುಗಳನ್ನು ಕೂಡ ಒಡೆದುಹಾಕಿದೆ.

ಒಂಟಿ ಸಲಗದ ದಿಢೀರ್ ದಾಳಿಯಿಂದಾಗಿ  4 ಆಟೊ, ಒಂದು ಕಾರನ್ನು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಪ್ರಸ್ತುತ ಘಟನಾ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಸ್ಥಳೀಯರು ಹೇಳುವಂತೆ ಬೆಳಗಿನ ಜಾವ ಸುಮಾರು 3 ಗಂಟೆಯಿಂದ ಆರಂಭವಾದ ಒಂಟಿ ಸಲಗದ ದಾಂಧಲೆ ಸತತ ಒಂದೂವರೆ ಗಂಟೆಯವರೆಗೂ ಮುಂದುವರೆಯಿತು. ಹೀಗಾಗಿ ಆನೆಯ  ರೌದ್ರಾವತರದಿಂದ ಭೀತಿಗೊಳಗಾದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇತ್ತ ಆನೆ ಕಾಡಿಗೆ ಮರಳಿತೋ ಅಥವಾ ಅಲ್ಲಿಯೇ ಸುತ್ತಮುತ್ತಲ ಪ್ರದೇಶದಲ್ಲಿದೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದ್ದು, ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ಒಡಾಡುವ  ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ತಜ್ಞರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.