ಯುವತಿಯ ನಗ್ನ ಫೋಟೋ ವಾಟ್ಸ್ಆಪ್ನಲ್ಲಿ ಶೇರ್: ಬ್ಯಾಂಕ್ ಅಧಿಕಾರಿ ಬಂಧನ
ಕಾಲೇಜು ವಿದ್ಯಾರ್ಥಿನಿಯ ಭಾವಚಿತ್ರದಲ್ಲಿ ಮುಖದ ಭಾಗ ತೆಗೆದು ಅಪರಿಚಿತ ಯುವತಿಯ ನಗ್ನ ಭಾವಚಿತ್ರಕ್ಕೆ ಅಂಟಿಸಿ ವಾಟ್ಸ್ಆಪ್ ನಲ್ಲಿ ಹರಿಬಿಟ್ಟಿದ್ದ ಧನಲಕ್ಷ್ಮೀ ಬ್ಯಾಂಕ್...

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯ ಭಾವಚಿತ್ರದಲ್ಲಿ ಮುಖದ ಭಾಗ ತೆಗೆದು ಅಪರಿಚಿತ ಯುವತಿಯ ನಗ್ನ ಭಾವಚಿತ್ರಕ್ಕೆ ಅಂಟಿಸಿ ವಾಟ್ಸ್ಆಪ್ ನಲ್ಲಿ ಹರಿಬಿಟ್ಟಿದ್ದ ಧನಲಕ್ಷ್ಮೀ ಬ್ಯಾಂಕ್ ಶಾಖೆಯ ಅಧಿಕಾರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅಧಿಕಾರಿ ಆಂಧ್ರಪ್ರದೇಶದ ಸಿಕಿಂದರಬಾದ್ ಧನಲಕ್ಷ್ಮೀ ಬ್ಯಾಂಕ್ ಶಾಖೆ ಸಹಾಯಕ ವ್ಯವಸ್ಥಾಪಕ 58 ವರ್ಷದ ಶೈಲೇಂದ್ರ ಗೊಜೆ ಎಂದು ತಿಳಿದುಬಂದಿದೆ. ಶೈಲೇಂದ್ರ ಗೊಜೆಯಿಂದ 1 ಲ್ಯಾಪ್ಟಾಪ್ ಮತ್ತು 2 ಮೊಬೈಲ್ ಫೋನ್ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಸಿಐಡಿ ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಂಬಂಧಿಕರ ಮೊಬೈಲ್ಗೆ ತಿಂಗಳ ಹಿಂದೆ ವಾಟ್ಸ್ಆಪ್ನಲ್ಲಿ ಫೋಟೋ ಬಂದಿತ್ತು. ಅದನ್ನು ಡೌನ್ಲೋಡ್ ಮಾಡಿದಾಗ, ನಗ್ನ ಭಾವಚಿತ್ರ ತೆರೆದುಕೊಂಡಿದೆ. ಯುವತಿ ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡುತ್ತಿರುವುದಾಗಿ ಸೈಬರ್ ಕ್ರೈಂ ಪೊಲೀಸರಿಗೆ ಫೆ.3ರಂದು ಯುವತಿ ಸಂಬಂಧಿಕರು ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಜಿ. ಮಹದೇವ್ ನೇತೃತ್ವದ ತಂಡ ಸಿಕಂದರಾಬಾದ್ನಲ್ಲಿ ಆರೋಪಿಯನ್ನು ಬಂಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


