ರಾಜ್ಯ

ಶಾಸಕ ಮುನಿರತ್ನ ಆಪ್ತರ ಕಚೇರಿ, ಮನೆ ಮೇಲೆ ಲೋಕಾ ದಾಳಿ: ಮಹತ್ವದ ದಾಖಲೆಗಳು ವಶ

ಶಾಸಕ ಮುನಿರತ್ನ ಅವರ ಆಪ್ತ ಎಂ.ಆರ್‌.ಜಯರಾಂ, ಬಿಬಿಎಂಪಿ ಮೂವರು ಎಂಜಿನಿಯರ್‌ಗಳ ಕಚೇರಿ ಮತ್ತು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕ ...

ಶಾಸಕ ಮುನಿರತ್ನ ಆಪ್ತರ ಕಚೇರಿ, ಮನೆ ಮೇಲೆ ಲೋಕಾ ದಾಳಿ: ಮಹತ್ವದ ದಾಖಲೆಗಳು ವಶ
ಮುನಿರತ್ನ
Published On :

ಬೆಂಗಳೂರು: ಶಾಸಕ ಮುನಿರತ್ನ ಅವರ ಆಪ್ತ ಎಂ.ಆರ್‌.ಜಯರಾಂ, ಬಿಬಿಎಂಪಿ ಮೂವರು ಎಂಜಿನಿಯರ್‌ಗಳ ಕಚೇರಿ ಮತ್ತು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕ ಕಾಲದಲ್ಲಿ ದಾಳಿ ನಡೆಸಿ ಪಾಲಿಕೆ ಕಾಮಗಾರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು    ವಶಪಡಿಸಿಕೊಂಡಿದ್ದಾರೆ.

ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾಲತೇಶ್‌, ಎಂ.ಕೆಂಪೇಗೌಡ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಐ.ಕೆ.ವಿಶ್ವಾಸ್‌ ಅವರ ಕಚೇರಿ, ಮನೆ ಮೇಲೆ ದಾಳಿ ನಡೆದಿದೆ. ಮುನಿರತ್ನ ಅವರ ಆಪ್ತ   ಎಂ.ಆರ್‌.ಜಯರಾಂ ಅವರ ಹೆಸರಘಟ್ಟ ಬಡಾವಣೆ ಮನೆ ಮತ್ತು ವೆಂಕಟೇಶಮೂರ್ತಿ ಅವರ ಸಪ್ತಗಿರಿ ಆಸ್ಪಾಲ್ಟ್‌ ಕಚೇರಿ ಮೇಲೂ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜಯರಾಂ ವೃಷಬಾದ್ರಿ ಕನ್‌ಸ್ಟ್ರಕ್ಷನ್‌  ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾಜಕಾರಣಿಯೊಬ್ಬರ ಪತ್ನಿ ಒಡೆತನದಲ್ಲಿ ಈ ಸಂಸ್ಥೆ ಇದೆ ಎಂದೂ ಮೂಲಗಳು ತಿಳಿಸಿವೆ. ಮಾಲತೇಶ್‌ ಮನೆಯಲ್ಲಿ  3.5 ಲಕ್ಷ ಹಾಗೂ, 2.5 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ದೊರೆತಿವೆ.

2014ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಬಿಎಂಪಿ ಟೆಂಡರ್ ಕರೆದಿತ್ತು. ರಾಜರಾಜೇಶ್ವರಿನಗರ ವಿಭಾಗದಲ್ಲಿ ರಸ್ತೆ ಕಾಮಗಾರಿ ನಿರ್ವಹಿಸದಿದ್ದರೂ, ಎಂಜಿನಿಯರ್‌ಗಳು ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಿಲ್‌ ಪಾವತಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

ಇದಕ್ಕೆ ಸಂಬಂಧಿಸಿದಂತೆ 2014ರ ಡಿಸೆಂಬರ್ 27ರಂದು ಲೋಕಾಯುಕ್ತ ಪೊಲೀಸರು ಮುನಿರತ್ನ ಅವರ ಪತ್ನಿ ಮಂಜುಳಾ ಹೆಸರಿನಲ್ಲಿರುವ ವೈಯಾಲಿಕಾವಲ್‌ನ ಮನೆ ಮೇಲೆ ದಾಳಿ ನಡೆಸಿ ಬಿಬಿಎಂಪಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ 900 ಕಡತ ಹಾಗೂ ಇತರೆ ದಾಖಲೆ ವಶಕ್ಕೆ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.