ಮಂಗಳಮುಖಿಯೊಂದಿಗೆ ಯುವಕನ ವಿವಾಹ: ಪೋಷಕರ ಆಕ್ರೋಶ
ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ, ಶಾಸ್ತ್ರೋಕ್ತವಾಗಿ ಮದುವೆಯಾಗಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದ್ದು, ವಿವಾಹಕ್ಕೆ ಯುವಕನ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ...

ಕೊಪ್ಪಳ: ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ, ಶಾಸ್ತ್ರೋಕ್ತವಾಗಿ ಮದುವೆಯಾಗಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದ್ದು, ವಿವಾಹಕ್ಕೆ ಯುವಕನ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಯಲಬುರ್ಗಾ ತಾಲೂಕಿನ ಗೆದಿಕೇರಿ ತಾಂಡದಾ ಶಿವಕುಮಾರ(20), ಕೊಪ್ಪಳದ ಸದಾಶಿವನಗರ ನಿವಾಸಿಯಾಗಿರುವ ಮಂಗಳಮುಖಿ ರಾಧಿಕಾ(19) ಅವರನ್ನು ವಿವಾಹವಾದ ಯುವಕನಾಗಿದ್ದಾನೆ.
ಇಬ್ಬರ ವಿವಾಹ ನಡೆಯುತ್ತಿದ್ದ ವಿಚಾರ ತಿಳಿದ ಯುವಕನ ಪೋಷಕರು ಪೊಲೀಸರನ್ನು ಕರೆತಂದು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮಂಗಳಮುಖಿಯರು ಹಾಗೂ ಯುವಕನ ಸಂಬಂಧಿಕರ ನಡುವೆ ಸಾಕಷ್ಟು ವಾಗ್ವಾದಗಳು ನಡೆದು ಕೊಪ್ಪಳದಲ್ಲಿ ಕೆಲವು ಗಂಟೆಗಳ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕೊಪ್ಪಳದಲ್ಲಿ ನನ್ನ ತಮ್ಮ ಇರುವುದಾಗಿ ತಿಳಿಯಿತು. ಮಂಗಳಮುಖಿಯರು ನನ್ನ ತಮ್ಮನಿಗೆ ಮೋಸ ಮಾಡಿ ಮದುವೆ ಮಾಡಿಸುತ್ತಿದ್ದಾರೆಂದು ಶಿವಕುಮಾರ್ ಸಹೋದರ ಫಕೀರಪ್ಪ ಅವರು ಹೇಳಿಕೊಂಡಿದ್ದಾರೆ.
ಮಂಗಳಮುಖಿಯರು ನೆಲೆಸಿರುವ ಕೊಪ್ಪಳದ ಬೆಂಕಿ ನಗರದಲ್ಲಿ ಶಿವಕುಮಾರ್ ಸಿಕ್ಕಿದ್ದರು. ಘಟನೆ ನಂತರ ಕೊನೆಗೂ ಶಿವಕುಮಾರ್ ಅವರ ಮನವೊಲಿಸಿ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು. ಈ ರೀತಿಯ ಘಟನೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶಗಳಿಲ್ಲ. ಪ್ರಕರಣ ಸಂಬಂಧ ಕಾನೂನು ಸಲಹೆ ಪಡೆದುಕೊಂಡ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


