ರಾಜ್ಯ

ಮೂಲಭೂತ ಕೊರತೆ: ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ದೂರ!

ರಾಜ್ಯ ಸರ್ಕಾರಿ ಶೆಲಗಳನ್ನು ವಿಲೀನಗೊಳಿಸುವ ಸರ್ಕಾರದ ನಡೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬರೆಬಿದ್ದಂತಾಗಿದ್ದು, 10 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುತ್ತು ತಂದಿದೆ...

ಮೂಲಭೂತ ಕೊರತೆ: ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ದೂರ!
ಮೂಲಭೂತ ಕೊರತೆ: ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ದೂರ!
Published On :

ಬೆಂಗಳೂರು: ರಾಜ್ಯ ಸರ್ಕಾರಿ ಶೆಲಗಳನ್ನು ವಿಲೀನಗೊಳಿಸುವ ಸರ್ಕಾರದ ನಡೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬರೆಬಿದ್ದಂತಾಗಿದ್ದು, 10 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುತ್ತು ತಂದಿದೆ.

ಕಲಬುರ್ಗಿಯಲ್ಲಿರುವ ಬಹುತೇಕ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿಯಿದ್ದು, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವ ಕಾರಣ ಮಕ್ಕಳು ಶಾಲೆಗೆ ದಾಖಲಾಗುತ್ತಿಲ್ಲ ಎಂಬ ಕೂಗುಗಳು ಕೇಳಿಬರುತ್ತಿವೆ.

ಇಲ್ಲಿನ ಮಕ್ಕಳು ಶಾಲೆಗೆ ಬರಲು ಸುಮಾರು 2 ಕಿ.ಮೀನಷ್ಟು ದೂರ ನಡೆದು ಬರಬೇಕಿದ್ದು, ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಶಾಲೆಗೆ ಮಕ್ಕಳು ದಾಖಲಾಗುತ್ತಿಲ್ಲ ಎಂದು ಅಲ್ಲಿನ ಮುಖ್ಯಸ್ಥರು ಹೇಳಿಕೊಳ್ಳುತ್ತಿದ್ದಾರೆ.

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಈಗಾಗಲೇ ಕಡಿಮೆಯಿದ್ದು, ಒಂದು ವೇಳೆ ಸರ್ಕಾರ ಶಾಲೆಗಳನ್ನು ವಿಲೀನಗೊಳಿಸಿದ್ದ  ಪಕ್ಷದಲ್ಲಿ ಇಲ್ಲಿನ ಮಕ್ಕಳು ಶಾಲೆಗೆ ಹೋಗಲು ಕನಿಷ್ಠ ಪಕ್ಷವೆಂದರೂ 4 ಕಿ.ಮೀನಷ್ಟು ದೂರ ನಡೆದು ಹೋಗಬೇಕಾಗಿ ಬರಬಹುದು. ಅಥವಾ ಮಕ್ಕಳನ್ನು ಅಷ್ಟು ದೂರ ಕಳುಹಿಸಲು ಒಪ್ಪದ ಪೋಷಕರು ವಿದ್ಯಾಭ್ಯಾಸ ಮಾಡಿಸುವುದನ್ನೇ ಬಿಡಿಸಬಹುದು.

ಈ ನಿಲುವಿಗೆ ಶೈಕ್ಷಣಿಕ ತಜ್ಞರು ಸರ್ಕಾರದ ಕಿಡಿಕಾರುತ್ತಿದ್ದು, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಪ್ರಯತ್ನ ಮಾಡುವ ಬದಲು ವಿಲೀನದ ಹೆಸರಿನಲ್ಲಿ ಶಾಲೆಗಳನ್ನೇ ಮುಚ್ಚಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಎಚ್ಚಾಗುವವರೆಗೆ ಸರ್ಕಾರ ಶಾಲೆಯನ್ನು ತೆರೆಯುವುದಿಲ್ಲ. ಇದರ ಅರ್ಥ ಶಾಲೆಯನ್ನು ಮುಚ್ಚುತ್ತಿದೆ ಎಂಬುದೇ. ಸರ್ಕಾರ ಶಾಲೆಯ ಮುಚ್ಚುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಎಂ.ಎಸ್. ತಿಮ್ಮಪ್ಪ ಮಾತನಾಡಿ, ಶಾಲೆ ಮುಚ್ಚುವ ಸರ್ಕಾರ ನಿರ್ಧಾರ ನಿಜಕ್ಕೂ ದುರಾದೃಷ್ಟಕರ. ಖಾಸಗಿ ಶಾಲೆಗಳಲ್ಲಿ ಓದಿಸಲು ಸಾಧ್ಯವಾಗದ ಪೋಷಕರು ಸರ್ಕಾರಿ ಶಾಲೆಯ ಮೇಲೆ ಅವಲಂಬಿತರಾಗಿರುತ್ತಾರೆ. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಶಾಲೆಯ ಗುಣಮಟ್ಟ, ಭೋದನಾ ಗುಣಮಟ್ಟ, ಹಾಗೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ಬದಲು ಸರ್ಕಾರ ಶಾಲೆಯನ್ನೇ ಮುಚ್ಚಲು ಮುಂದಾಗುತ್ತಿದೆ. ಸರ್ಕಾರದ ನಿರ್ಧಾರ ಸೋಲು ಒಪ್ಪಿಕೊಂಡಂತಿದೆ ಎಂದು ಹೇಳಿದ್ದಾರೆ.

ನಮ್ಮ ಶಾಲೆ ಆಂತರಿಕ ಪ್ರದೇಶದಲ್ಲಿದ್ದು, ಶಾಲೆಯಲ್ಲಿ 9 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 5 ಹಳ್ಳಿಗಳಿಗೆ ಒಂದೇ ಶಾಲೆಯಿರುವುದು ದುರಾದೃಷ್ಟಕರ. ಮಕ್ಕಳು ಬಹಳ ದೂರದಿಂದ ಶಾಲೆಗೆ ಬರಬೇಕಿದ್ದು, ಇಲ್ಲಿನ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಹೀಗಾಗಿ ಇದು ಶಾಲೆಯ ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಶಾಲೆ ಮುಚ್ಚಿದ್ದೇ ಆದರೆ, ಬಡ ಮಕ್ಕಳು ಎಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆಂದು ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ.

ಮೂಲಗಳ ಪ್ರಕಾರ. ಖಾಸಗಿ ಶಾಲೆಗಳಲ್ಲಿ ಸರ್ಕಾರ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಯಾರು ದಾಖಲು ಮಾಡುತ್ತಾರೆ? ಮಕ್ಕಳಿಗೆ ಕಡ್ಡಾಯ ಶಿಕ್ಷಣ ಎಂಬುದು ರಾಷ್ಟ್ರೀಯ ನೀತಿಯಾಗಿದ್ದು, ಈ ಬಗ್ಗೆ ಯಾರೂ ಪ್ರಶ್ನೆ ಎತ್ತುವ ಹಕ್ಕಿಲ್ಲ ಎಂದು ಇಲಾಖೆ ಎಂದು ತಿಳಿದುಬಂದಿದೆ.

ಮಕ್ಕಳು ಶಾಲೆಗೆ ಬಾರದಿರಲು ಮೂಲಭೂತ ಸೌಕರ್ಯಗಳ ಕೊರತೆ ಒಂದು ಸಮಸ್ಯೆಯಾಗಿದ್ದರೆ, ಕುಟುಂಬಸ್ಥರು ವಲಸೆ ಹೋಗುವುದೂ ಕೂಡ ಮತ್ತೊಂದಡೆ ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದೆ. ಉತ್ತರ ಕರ್ನಾಟಕ ಬಹುತೇಕ ಜನರು ಉದ್ಯೋಗ ಹುಡುಕಿ ನಗರಕ್ಕೆ ಬರುತ್ತಿರುವುದು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ.

ಇನ್ನು ಶಿಕ್ಷಕರ ಕೊರತೆ ಕೂಡ ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದ್ದು, ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಶಾಲೆಗಳನ್ನು ವಿಲೀನ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರಿ ಶಾಲೆ ಕುರಿತ ಕೆಲ ಅಂಕಿ ಅಂಶಗಳು ಇಂತಿವೆ...

  • ಸರ್ಕಾರಿ ಪ್ರಾಥಮಿಕ ಶಾಲೆಗಳು 44, 295
  • ಖಾಸಗಿ ಅನುದಾನಿ ಶಾಲೆಗಳು 4,840
  • ಖಾಸಗಿ ಅನುದಾನಿತವಲ್ಲದ ಶಾಲೆಗಳು 17,754
  • ಶಿಕ್ಷಕರ ಕೊರತೆ 1.86 ಲಕ್ಷ
  • 32 ಸಾವಿರ ಹುದ್ದೆಗಳಲ್ಲಿ ಭರ್ತಿಗೊಂಡಿರುವ ಶಿಕ್ಷಕರ ಹುದ್ದೆಗಳ ಸಂಖ್ಯೆ 9 ಸಾವಿರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.