ಬಡಬಾಲಕನ ಚಿಕಿತ್ಸೆಗೆ 26 ಲಕ್ಷ ರೂ ನೆರವು: ಮಾನವೀಯತೆ ಮೆರೆದ ಎಚ್ ಡಿಕೆ
ನಾರಾಯಣ ಹೃದಯಾಲಯದಲ್ಲಿ ನಾಳೆ ನಡೆಲಿರುವ ಶಸ್ತ್ರ ಚಿಕಿತ್ಸೆಗೆ 26 ಲಕ್ಷ ರೂ ನೆರವು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ...

ಬೆಂಗಳೂರು: ಬಳ್ಳಾರಿ ಮೂಲದ ಯಶ್ವಂತ್ ಎಂಬ ಬಾಲಕನಿಗೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಚಿಕಿತ್ಸೆ ಆಗಬೇಕಿದೆ. ನಾರಾಯಣ ಹೃದಯಾಲಯದಲ್ಲಿ ನಾಳೆ ನಡೆಲಿರುವ ಶಸ್ತ್ರ ಚಿಕಿತ್ಸೆಗೆ 26 ಲಕ್ಷ ರೂ ನೆರವು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಳಾರಿ ಜಿಲ್ಲೆಯ ಪರುಶುರಾಮ್ ಮತ್ತು ರೂಪಲೇಖಾ ದಂಪತಿಯ ಪುತ್ರ ಯಶವಂತ ಬೊನ್ ನ್ಯಾರೋ ಟ್ರಾನ್ಸಪ್ಲಾಂಟೇಶನ್ ಕಾಯಿಲೆಯಿಂದ ಬಳಲುತ್ತಿದ್ದ. ಬಡತನದಲ್ಲಿರುವ ದಂಪತಿ ಮಗನ ಚಿಕಿತ್ಸೆಗಾಗಿ ಪರದಾಡುತ್ತಿದ್ದರು. ಈ ಕುರಿತು ಖಾಸಗಿ ಸುದ್ದಿ ವಾಹಿನಿ ಸಹಾಯ ಹಸ್ತ ಚಾಚುವಂತೆ ವರದಿ ಪ್ರಸಾರ ಮಾಡಿತ್ತು. ಸುದ್ದಿ ವಾಹಿನಿಯ ವರದಿಗೆ ನೋಡಿದ ಕುಮಾರಸ್ವಾಮಿ ಬಾಲಕನ ಚಿಕಿತ್ಸೆಗಾಗಿ 26 ಲಕ್ಷ ರೂಪಾಯಿ ಸಹಾಯ ಧನ ನೀಡಿದ್ದಾರೆ.
ರಾಜ್ಯ ಸರ್ಕಾರ ಬಿಪಿಎಲ್ ಯೋಜನೆ ಅಡಿಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಬರಿಸುವ ಯೋಜನೆಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿರುವ ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ, ಬಡವರಿಗೆ ಸಹಾಯ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮದಲ್ಲಿ ನೋಡಿ ಸಾಕಷ್ಟು ಜನ ನನ್ನ ಬಳಿ ಬರ್ತಾರೆ. ಎಲ್ಲರಿಗೂ ನೆರವು ನೀಡುವಷ್ಟು ಆರ್ಥಿಕ ಶಕ್ತಿ ನನ್ನಲ್ಲಿ ಇಲ್ಲ. ಇಂತಹ ಸ್ಥಿತಿಯಲ್ಲಿರುವ ಬಡವರಿಗೆ ನೆರವು ನೀಡಿ ಪಾಪ ಕರ್ಮ ತೊಳೆದುಕೊಳ್ಳಲಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


